ಸಿಡಿಲಿಗೆ 17ಮಂದಿ ಬಲಿ: ಬಿಹಾರ ಸಿಎಂ ಸಂತಾಪ, 4ಲಕ್ಷ ಪರಿಹಾರ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಿಹಾರದಲ್ಲಿ ಭಾನುವಾರ ಉಂಟಾದ ಸಿಡಿಲಿನಬ್ಬರಕ್ಕೆ ರಾಜ್ಯದಾದ್ಯಂತ 17 ಜನರು ಸಾವನ್ನಪ್ಪಿದ್ದಾರೆ. ಜನರ ಸಾವಿಗೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಸ್ಥರಿಗೆ ತಲಾ 4 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಸಿಎಂ ಭಾಗಲ್‌ಪುರ-3, ವೈಶಾಲಿ-3, ಖಗಾರಿಯಾ- 2, ಕತಿಹಾರ್‌- 1, ಸಹರ್ಸಾದಲ್ಲಿ- 1, ಮಾಧೇಪುರ- 1, ಬಂಕಾ- 2 ಮತ್ತು ಮುಂಗೇರ್‌ನಲ್ಲಿ ಒಬ್ಬರು ಸಿಡಿಲಿನ ಹೊಡೆತಕ್ಕೆ ಸಾವನ್ನಪ್ಪಿದ್ದಾರೆ. ಸಂತ್ರಸ್ತ ಕುಟುಂಬಗಳಿಗೆ ದೇವರು ದುಖಃ ಭರಿಸುವ ಶಕ್ತಿ ನೀಡಲಿ. ಮೃತರ ಕುಟುಂಬಕ್ಕೆ 4 ಲಕ್ಷ ರೂ.ಗಳನ್ನು ತಕ್ಷಣವೇ ನೀಡಲಾಗುವುದು ಎಂದು ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ. ಪ್ರತಿಕೂಲ ವಾತಾವರಣದಲ್ಲಿ ಸಂಪೂರ್ಣ ಜಾಗರೂಕತೆ ವಹಿಸಲು ಮತ್ತು ಗುಡುಗು ಸಹಿತ ಮಳೆಯ ಕಾರಣದಿಂದ ವಿಪತ್ತು ನಿರ್ವಹಣಾ ಇಲಾಖೆ ನೀಡಿರುವ ಸಲಹೆಗಳನ್ನು ಪಾಲಿಸುವಂತೆ ಮನವಿ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!