Tuesday, July 5, 2022

Latest Posts

ಲಿಬಿಯಾದಲ್ಲಿ ಮಗುಚಿ ಬಿದ್ದ ಬೋಟ್: 51 ಜನರ ರಕ್ಷಣೆ, 17 ಮಂದಿ ಮೃತಪಟ್ಟಿರುವ ಶಂಕೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಉತ್ತರ ಆಫ್ರಿಕಾದ ಲಿಬಿಯಾ ದೇಶದಲ್ಲಿ ವಲಸಿಗರನ್ನು ಹೊತ್ತೊಯ್ಯುತ್ತಿದ್ದ ಬೋಟ್ ಮಗುಚಿ ಬಿದ್ದ ಪರಿಣಾಮ ಕನಿಷ್ಠ 17 ಮಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
70 ಮಂದಿ ವಲಸಿಗರು ಯುರೋಪ್ ನಲ್ಲಿ ಆಶ್ರಯ ಅರಸಿ ತೆರಳುತ್ತಿದ್ದರು. ಈ ವೇಳೆ ಬೋಟ್ ಮೆಡಿಟರೇನಿಯನ್ ಸಮುದ್ರದಲ್ಲಿ ಮುಳುಗಿದೆ.
ದುರಂತದ ಬಗ್ಗೆ ಮಾಹಿತಿ ತಿಳಿದ ಕೂಡಲೇ ಲಿಬಿಯಾದ ಕರಾವಳಿ ರಕ್ಷಣಾ ಪಡೆ 51 ಜನರನ್ನು ರಕ್ಷಿಸಿದೆ. ನಾಪತ್ತೆಯಾಗಿರುವ 17 ಮಂದಿಯಲ್ಲಿ ಒಂದು ಮೃತ ದೇಹಪತ್ತೆಯಾಗಿದ್ದು, ಉಳಿದವರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಕಣ್ಮರೆಯಾದವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss