Thursday, July 7, 2022

Latest Posts

11 ಕೋಟಿ ಕೋವಿಶೀಲ್ಡ್​ ಲಸಿಕೆ ಪೂರೈಕೆಗಾಗಿ ಸೀರಮ್​ಗೆ 1732 ಕೋಟಿ ರೂ. ಬಿಡುಗಡೆಗೊಳಿಸಿದ ಕೇಂದ್ರ ಸರಕಾರ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಮೇ, ಜೂನ್ ಹಾಗೂ ಜುಲೈ ತಿಂಗಳಿನಲ್ಲಿ 11 ಕೋಟಿ ಕೋವಿಶೀಲ್ಡ್ ಕೊರೋನಾ ಲಸಿಕೆ ಡೋಸ್‌ಗಳ ಪೂರೈಕೆಗೆ ಕೇಂದ್ರ ಸರ್ಕಾರ ಸೀರಮ್​ಗೆ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾಗೆ 1732.50 ಕೋಟಿ ರೂ ಮುಂಗಡ ಹಣ ಬಿಡುಗಡೆ ಮಾಡಿರುವುದಾಗಿ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ತೆರಿಗೆ ಹೊರತುಪಡಿಸಿ ಸಂಸ್ಥೆಗೆ ಒಟ್ಟು 1699.50 ಕೋಟಿ ರೂ ನೀಡಿರುವುದಾಗಿ ಕೇಂದ್ರ ಸ್ಪಷ್ಟಪಡಿಸಿದೆ. ಟಿಡಿಎಸ್ ನಂತರ 1699.50 ಕೋಟಿ ರೂ.ಯಷ್ಟು ಮೊತ್ತವನ್ನು ಏಪ್ರಿಲ್ 28ರಂದು ಎಸ್‌ಐಐ ಸ್ವೀಕರಿಸಿದೆ ಎಂದು ಹೇಳಿದೆ.

ಕೇಂದ್ರವು ಲಸಿಕೆಗಳ ಪೂರೈಕೆಗೆ 1732.50 ಕೋಟಿ ರೂಪಾಯಿ ನೀಡಿದೆ. ಕಳೆದ ಒಂದು ವರ್ಷದಿಂದಲೂ ಸರ್ಕಾರದ ಸಹಯೋಗದೊಂದಿಗೆ ನಾವು ಕಾರ್ಯ ನಿರ್ವಹಿಸುತ್ತಿದ್ದೇವೆ. ಸರ್ಕಾರದ ಬೆಂಬಲಕ್ಕೆ ಧನ್ಯವಾದ. ಇಂಥ ಬಿಕ್ಕಟ್ಟಿನ ಸಮಯದಲ್ಲಿಲಸಿಕೆ ಉತ್ಪಾದನೆಯನ್ನು ಇನ್ನಷ್ಟು ವೇಗಗತಿಯಲ್ಲಿ ನಡೆಸಲು ನಿರ್ಧರಿಸಿದ್ದೇವೆ ಎಂದು ಸೆರಂ ಇನ್‌ಸ್ಟಿಟ್ಯೂಟ್ ತಿಳಿಸಿದೆ.

ಇನ್ನು ಕೇಂದ್ರ ಸರ್ಕಾರ ಕೊರೋನಾ ಲಸಿಕೆ ಸಂಬಂಧ ಹೊಸ ಆದೇಶ ಹೊರಡಿಸಿಲ್ಲ ಎಂಬ ವರದಿ ಸುಳ್ಳು ಎಂದು ಸಚಿವಾಲಯ ತಿಳಿಸಿದ್ದು, ಸರ್ಕಾರದ ಕೊನೆಯ ಆದೇಶದಲ್ಲಿ 10 ಕೋಟಿ ಕೋವಿಶೀಲ್ಡ್‌ ಲಸಿಕೆ ಪೂರೈಕೆಗೆ ತಿಳಿಸಲಾಗಿತ್ತು. ಮೇ 3ರಂದು 8.744 ಡೋಸ್‌ಗಳಷ್ಟು ಲಸಿಕೆ ಸರಬರಾಜು ಆಗಿದೆ ಎಂದು ಹೇಳಿದೆ.

ಇನ್ನು ಐದು ಕೋಟಿ ಕೋವ್ಯಾಕ್ಸಿನ್ ಲಸಿಕೆ ಪೂರೈಕೆಗೆ ಏಪ್ರಿಲ್ 28ರಂದು ಭಾರತ್ ಬಯೋಟೆಕ್ ಕಂಪನಿಗೆ 787.50 ಕೋಟಿ ರೂ ನೀಡಲಾಗಿದೆ ಎಂದು ಮಾಹಿತಿ ನೀಡಿದೆ.

ಇದರೊಂದಿಗೆ, ಕೇಂದ್ರ ಸರ್ಕಾರ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಿಗೆ ಮುಂದಿನ ಮೂರು ದಿನಗಳಲ್ಲಿ ಹೆಚ್ಚುವರಿಯಾಗಿ 60 ಲಕ್ಷ ಡೋಸ್ ಲಸಿಕೆಯನ್ನು ಪೂರೈಕೆ ಮಾಡುವುದಾಗಿ ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss