Wednesday, August 17, 2022

Latest Posts

ಜ.18ರಂದು ರಾಜ್ಯಾದ್ಯಂತ ಸಂಕಲ್ಪ ಸಮಾವೇಶ: ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ

ಹೊಸದಿಗಂತ ವರದಿ,ಕಲಬುರಗಿ:

ಇಡೀ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೇರುಮಟ್ಟದಿಂದ ಬಲಪಡಿಸಲು ಇಡೀ ರಾಜ್ಯಾದ್ಯಂತ ಸಂಕಲ್ಪ ಸಮಾವೇಶವನ್ನು ಕಾಂಗ್ರೆಸ್ ಪಕ್ಷವು ಹಮ್ಮಿಕೊಂಡಿದ್ದು, ಇದೇ ಮುಂಬರುವ 18ರಂದು ವಿಭಾಗವಾರು ಸಂಕಲ್ಪ ಸಮಾವೇಶವನ್ನು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದ್ದಾರೆ.

ಅವರು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಇದೇ 18ರಂದು ನಗರದ ಜೈ ಭವಾನಿ ಸಭಾಂಗಣದಲ್ಲಿ ಕಾಂಗ್ರೆಸ್ ಪಕ್ಷದ ವಿಭಾಗವಾರು ಸಮಾವೇಶವನ್ನು ನಮ್ಮ ಪಕ್ಷದ ಹಿರಿಯರ ಸಮ್ಮುಖದಲ್ಲಿ ಹಮ್ಮಿಕೊಳ್ಳಾಗಿದ್ದು, ಕಾಂಗ್ರೆಸ್ ಪಕ್ಷವನ್ನು ಬೇರುಮಟ್ಟದ ಜೊತೆಗೆ ಸಂಘಟನೆಯ ಮೂಲಕ ಪಕ್ಷಕ್ಕೆ ಹೊಸ ಚೈತನ್ಯ ತುಂಬುವ ಕೆಲಸವಾಗಲಿದೆ ಎಂದರು. ಇದರೊಂದಿಗೆ ಜಿಲ್ಲೆಯಲ್ಲಿ ಗ್ರಾಮ ಸಮಾವೇಶಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.

ಬಿಜೆಪಿ ವಿರುದ್ದ ವಾಗ್ದಾಳಿ: ಬಿಜೆಪಿ ಪಕ್ಷವು ಜನ ವಿರೋಧಿ, ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ಈ ದೇಶವನ್ನು ಹಾಳು ಮಾಡುವುದರ ಜೊತೆಗೆ ರೈತರಿಗೆ ಅನ್ಯಾಯವೆಸಗುತ್ತದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.ಕಣ್ಣು ಕಿವಿ ಮೂಗು ಮಾನವೀಯತೆಯನ್ನು ಮರೆತು ಸರ್ಕಾರ ವರ್ತಿಸುತ್ತಿದೆ ಎಂದರು. ರಾಜ್ಯದಲ್ಲಿ ನೆರೆ ಬಂದರೂ ರೈತರ ಕಷ್ಟಗಳಿಗೆ ಸ್ಫಂಧಿಸದೇ ಅನ್ಯಾಯ ಮಾಡುತ್ತಿದೆ. ಮಳೆಯಿಂದ ಮನೆ,ಮಠ ಬೆಳೆಯನ್ನು ಕಳೆದುಕೊಂಡು ಕಂಗಾಲಾಗಿರುವ ರೈತರಿಗೆ ಸಾಂತ್ವನ ಕೂಡ ಹೇಳದ ರಾಜ್ಯ ಸರ್ಕಾರ, ಭಂಡತನವನ್ನು ಪ್ರದರ್ಶೀಸುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಪ್ರಿಯಾಂಖ ಖರ್ಗೆ, ಅಜಯ್ ಸಿಂಗ್, ತಿಪ್ಪಣಪ್ಪಾ ಕಮಕನೂರ, ಅಲ್ಲಂಪ್ರಭು ಪಾಟೀಲ, ಅಧ್ಯಕ್ಷ ಜಗದೇವ ಗುತ್ತೇದಾರ, ನೀಲಕಂಠರಾವ ಮೂಲಗೆ, ಶರಣು ಮೋದಿ, ಸುಭಾಷ ರಾಠೋಡ, ಬಾಬುರಾವ ಚವ್ಹಾಣ ಸೇರಿದಂತೆ ಅನೇಕರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!