Thursday, August 18, 2022

Latest Posts

ಅಸ್ಸಾಂನ ಅರಣ್ಯ ಪ್ರದೇಶದಲ್ಲಿ ಸಿಡಿಲು ಬಡಿದು 18 ಆನೆಗಳ ದಾರುಣ ಸಾವು

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಅಸ್ಸಾಂ ನ ನಾಗಾಂವ್ ಜಿಲ್ಲೆಯ ಬಮುನಿ ಬೆಟ್ಟದಲ್ಲಿ ಮಿಂಚಿನ ಹೊಡೆತಕ್ಕೆ 18 ಕಾಡಾನೆಗಳು ಮೃತಪಟ್ಟಿವೆ ಎಂದು ರಾಜ್ಯ ಅರಣ್ಯ ಇಲಾಖೆ ತಿಳಿಸಿದೆ.
ಗುರುವಾರ ತಡರಾತ್ರಿ ನಾಗಾಂವ್ ಅರಣ್ಯದ ಕತಿಯಾಟೋಲಿಯ ಕಂಡೋಲಿ ಮೀಸಲು ಅರಣ್ಯದಲ್ಲಿ ಈ ದುರ್ಘಟನೆ ನಡೆದಿದೆ.
ಆನೆಗಳ ಸಾವಿನ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು 18 ಆನೆಗಳ ಶವಗಳನ್ನು ಪತ್ತೆ ಮಾಡಿದ್ದಾರೆ. ಅಧಿಕಾರಿಗಳು ಮತ್ತಷ್ಟು ಆನೆಗಳ ಪತ್ತೆಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.
ವನ್ಯಜೀವಿ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಅಮಿತ್ ಸಹಯ್ ಅವರು ಮಾತನಾಡಿದ್ದು, ಕಾಡಿನಲ್ಲಿ ಶವಗಳು ಎರಡು ಗುಂಪುಗಳಾಗಿ ಬಿದ್ದಿರುವುದು ಕಂಡುಬಂದಿದೆ. ಹದಿನಾಲ್ಕು ಆನೆಗಳು ಬೆಟ್ಟದ ಮೇಲೆ ಪತ್ತೆಯಾಗಿದ್ದು, ಉಳಿದ ನಾಲ್ಕು ಆನೆಗಳು ಬೆಟ್ಟದ ಕೆಳಭಾಗದಲ್ಲಿ ಪತ್ತೆಯಾಗಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!