Monday, July 4, 2022

Latest Posts

ಚಾರ್​ಧಾಮ್​ ಯಾತ್ರೆಗೆ 18 ಲಕ್ಷ ಭಕ್ತರ ಆಗಮನ!

ಹೊಸದಿಗಂತ ದಿಜಿಟಲ್‌ ಡೆಸ್ಕ್‌

ಮೇ 3 ರಿಂದ ಆರಂಭವಾಗಿದ್ದ ವಿಶ್ವವಿಖ್ಯಾತ ಚಾರ್​ಧಾಮ್​ ಯಾತ್ರೆಗೆ ಈ ಬಾರಿ ದಾಖಲೆ ಪ್ರಮಾಣದ ಭಕ್ತರು ಆಗಮಿಸಿದ್ದು, ಯಾತ್ರೆ ಆರಂಭವಾದ ಒಂದು ತಿಂಗಳಲ್ಲೇ 18 ಲಕ್ಷ ಯಾತ್ರಿಕರು ಆಗಮಿಸಿದ್ದಾರೆ.

ಚಾರ್​ಧಾಮ್​ ಯಾತ್ರೆಗೆ ಇಲ್ಲಿಯವರೆಗೆ 18 ಲಕ್ಷದ 49 ಸಾವಿರದ 308 ಭಕ್ತರು ಭೇಟಿ ನೀಡಿದ್ದಾರೆ. ಇದರಲ್ಲಿ ಬದರಿನಾಥ ಧಾಮವನ್ನು ತಲುಪಿದ ಭಕ್ತರ ಸಂಖ್ಯೆ 7 ಲಕ್ಷ 66 ಸಾವಿರದ 542. ಇಷ್ಟು ಪ್ರಮಾಣದ ಭಕ್ತರು ಬದರಿನಾಥನ ದರುಶನ ಪಡೆದಿದ್ದಾರೆ.

ಕೊರೋನಾ ಹಿನ್ನೆಲೆ ಸ್ಥಗಿತವಾಗಿದ್ದ ಯಾತ್ರೆ ಮತ್ತೆ ಆರಂಭವಾಗಿದ್ದು, 2019 ರಲ್ಲಿ ಕೊರೊನಾಗೂ ಮುನ್ನ 6 ತಿಂಗಳ ಯಾತ್ರೆಯಲ್ಲಿ 10 ಲಕ್ಷ ಭಕ್ತರು ಮಾತ್ರ ಭೇಟಿ ನೀಡಿದ್ದರು. ಆದರೆ, ಈ ಬಾರಿ ಅದು 18 ಲಕ್ಷ ದಾಟಿದೆ. ಇದರಲ್ಲಿ ಕೇದಾರನಾಥಕ್ಕೆ 5 ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸಿದ್ದಾರೆ. ಇನ್ನೂ 10 ಲಕ್ಷ ಜನರು ಕೇದಾರನಾಥನಕ್ಕೆ ಬರಲಿದ್ದಾರೆ ಎಂದು ಅಂದಾಜಿಸಲಾಗಿದೆ.

ಕೇದಾರನಾಥಕ್ಕೆ ಮೇ 6 ರಿಂದ 5,48,888 ಯಾತ್ರಿಕರು ಭೇಟಿ ನೀಡಿದ್ದಾರೆ. ಇನ್ನೂ 22,410 ಭಕ್ತರು ದರುಶನಕ್ಕೆ ಕಾದಿದ್ದಾರೆ. ಮತ್ತೊಂದೆಡೆ, ಮೇ 8 ರಿಂದ ಬದರಿನಾಥ ಧಾಮಕ್ಕೆ ಎರಡೂ ಕ್ಷೇತ್ರಗಳಿಗೆ ಭೇಟಿ ನೀಡುವ ಯಾತ್ರಿಕರ ಸಂಖ್ಯೆ 13,15,430 ತಲುಪಲಿದೆ. ಇನ್ನು ಗಂಗೋತ್ರಿಗೆ ಇಲ್ಲಿಯವರೆಗೆ 3,05,179 ಯಾತ್ರಿಕರು ಬಂದರೆ, 2,28,699 ಭಕ್ತರು ಯಮುನೋತ್ರಿ ಧಾಮಕ್ಕೆ ಭೇಟಿ ನೀಡಿದ್ದಾರೆ.

ಚಾರ್​ಧಾಮ್​ ಯಾತ್ರೆಗೆ ದಾಖಲೆಯ ಪ್ರಮಾಣದಲ್ಲಿ ಯಾತ್ರಿಕರು ಬರುತ್ತಿರುವ ಹಿನ್ನೆಲೆಯಲ್ಲಿ ಭಕ್ತರನ್ನು ನಿಯಂತ್ರಿಸುವ ಸಲುವಾಗಿ ಯಾತ್ರೆಯಲ್ಲಿ ಪಾಲ್ಗೊಳ್ಳಲು ನೋಂದಣಿ ಕಡ್ಡಾಯ ಮಾಡಲಾಗಿದೆ.ಹೀಗಾಗಿ ಪೊಲೀಸರು ಪ್ರಯಾಣದ ಮಾರ್ಗಗಳಲ್ಲಿ ನಿರ್ಮಿಸಲಾದ ಚೆಕ್​ಪೋಸ್ಟ್‌ಗಳಲ್ಲಿ ಪ್ರಯಾಣಿಕರ ನೋಂದಣಿ ಪರಿಶೀಲನಾ ಕಾರ್ಯ ನಡೆಸಲಾಗುತ್ತಿದೆ. ಈ ವೇಳೆ, ನೋಂದಣಿ ಮಾಡದವರನ್ನು ವಾಪಸ್ ಕಳುಹಿಸಲಾಗುತ್ತಿದೆ. ಯಾತ್ರೆಗೆ ತೆರಳಲು ಬಯಸುವವರು ಈ ವೆಬ್‌ಸೈಟ್ https://registrationandtouristcare.uk.gov.in ನಲ್ಲಿ ನೋಂದಾಯಿಸಿಕೊಳ್ಳಬಹುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss