18 ಲಕ್ಷ ರೂ.ಗೆ ಖರೀದಿ ಆಯ್ತು ‘ಚಾಮುಂಡಿ ಎಕ್ಸ್ ಪ್ರೆಸ್’!

ಹೊಸ ದಿಗಂತ ವರದಿ, ಶಿವಮೊಗ್ಗ :

ಹೋರಿ ಹಬ್ಬದಲ್ಲಿ ರಾಜ್ಯಾದ್ಯಂತ ಹೆಸರು ಮಾಡಿ, ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿರುವ ಚಾಮುಂಡಿ ಎಕ್ಸ್‌ಪ್ರೆಸ್‌ ಹೋರಿಯನ್ನು ತಾಲೂಕಿನ ಸಮನವಳ್ಳಿ ಗ್ರಾಮದ ಸಮಾಜ ಸೇವಕ ಪ್ರಸನ್ನಕುಮಾರ್ ಎಂ. ಸಮನವಳ್ಳಿ ಅವರು 18 ಲಕ್ಷ ರೂ. ದಾಖಲೆಯ ಮೊತ್ತಕ್ಕೆ ಖರೀದಿ ಮಾಡಿದ್ದಾರೆ.
ಹೋರಿ ಹಬ್ಬದ ಅಖಾಡ ಯಾವುದೇ ಇರಲಿ, ಚಾಮುಂಡಿ ಎಕ್ಸ್‌ಪ್ರೆಸ್ ಬಂದಿತೆಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಉತ್ಸಾಹ. ಅಂತಹ ಅಭಿಮಾನಿಗಳ ಪಡೆ ಹೊಂದಿರುವ ಚಿಕ್ಕಲಿಂಗದಹಳ್ಳಿಯ ಚಾಮುಂಡಿ ಎಕ್ಸ್‌ಪ್ರೆಸ್‌ ಹೋರಿಯನ್ನು ಸೊರಬ ತಾಲ್ಲೂಕಿನ
ಪ್ರಸನ್ನ ಕುಮಾರ್‌ 18 ಲಕ್ಷ ರೂ. ಗೆ ಖರೀದಿ ಮಾಡಿದ್ದಾರೆ.
ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಅಭಿಮಾನಿ ಬಳಗವನ್ನು ಹೊಂದಿರುವ ಹೋರಿ ಬಹುತೇಕ ಎಲ್ಲಾ ಹೋರಿ ಹಬ್ಬಗಳಲ್ಲೂ ಬಂಪರ್ ಬಹುಮಾನ ಪಡೆದಿದೆ.
ಈ ಹೋರಿಯ ವಿಶೇಷ ಅಂದ್ರೆ ಅಖಾಡದಲ್ಲಿ ಪೀಪಿ, ಬಲೂಲ್, ಜೂಲಗಳನ್ನು ಹೊತ್ತು ಯಾರೊಬ್ಬರ ಕೈಗೂ ಸಿಗದೇ ಓಡುತ್ತೆ. ಮನೆಯಲ್ಲಿ ಮಾತ್ರ ಸೌಮ್ಯ ಸ್ವಭಾವದಿಂದ ಇರುತ್ತದೆ.
ಜನಪದ ಕ್ರೀಡೆಯಾಗಿರುವ ಹೋರಿ ಹಬ್ಬ ಉಳಿಯಬೇಕು. ತಾವು ಸಹ ಹೋರಿ ಹಬ್ಬದ ಅಭಿಮಾನಿಯಾಗಿದ್ದು, ಈಗಾಗಲೇ ತಮ್ಮ ಬಳಿ ಏಕದಂತ, ರೇಣುಕಾಂಬ ಎಕ್ಸ್‌ಪ್ರೆಸ್‌, ಸಮನವಳ್ಳಿ ಅಧ್ಯಕ್ಷ, ಸಮನವಳ್ಳಿ ಸಾಹುಕಾರ ಎಂಬ ಹೋರಿಗಳಿವೆ. ತಮ್ಮ ಪುತ್ರ ಪರೀಕ್ಷಿತ್ ಕೆಲ ದಿನಗಳಿಂದ ಆಟವಾಡುವಾಗ ಚಾಮುಂಡಿ ಎಕ್ಸ್‌ಪ್ರೆಸ್ ಎಂದು ಆಟವಾಡುತ್ತಿದ್ದನು. ಅಷ್ಟರಲ್ಲೇ ಚಾಮುಂಡಿ ಎಕ್ಸ್‌ಪ್ರೆಸ್‌ ಹೋರಿ ಮಾರಾಟಕ್ಕಿರುವ ವಿಷಯ ತಿಳಿದು ಖರೀದಿಸಿದ್ದೇನೆ ಎನ್ನುತ್ತಾರೆ ಹೋರಿ ಮಾಲೀಕ ಪ್ರಸನ್ನ ಕುಮಾರ್ ಎಂ  ಸಮನವಳ್ಳಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!