Sunday, August 14, 2022

Latest Posts

ನೈಜೀರಿಯಾದ ಮಸೀದಿ ಮೇಲೆ ಗುಂಡಿನ ದಾಳಿ: 18 ಮಂದಿ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ನೈಜೀರಿಯಾದ ಮಸೀದಿಯೊಂದರ ಮೇಲೆ ಮುಸುಕುಧಾರಿಗಳು ದಾಳಿ ಮಾಡಿದ್ದು, ಕನಿಷ್ಠ 18 ಜನ ಮೃತಪಟ್ಟಿದ್ದಾರೆ.
ರಾಜಧಾನಿ ಅಬುಜಾದಿಂದ ಸುಮಾರು 270 ಕಿ.ಮೀ ದೂರದಲ್ಲಿರುವ ಮುಜಕುಕಾ ಪ್ರದೇಶದಲ್ಲಿ ಈ ದಾಳಿ ನಡೆದಿದೆ.
ಸೋಮವಾರ ಮುಂಜಾನೆ ಪ್ರಾರ್ಥನೆ ಸಮಯದಲ್ಲಿ ಬಂದೂಕುಧಾರಿಗಳು ಏಕಾಏಕಿ ಗುಂಡಿನ ದಾಳಿ ಮಾಡಿದ್ದಾರೆ. ದಾಳಿಯಲ್ಲಿ 18 ಮಂದಿ ಮೃತಪಟ್ಟಿದ್ದು, 4 ಮಂದಿ ತೀವ್ರ ಗಾಯಗೊಂಡಿದ್ದಾರೆ ಎಂದು ಸ್ಥಳೀಯಾಡಳಿತ ಪ್ರದೇಶದ ಅಧ್ಯಕ್ಷ ಅಲ್ಹಾಸನ್​ ಇಸಾ ಮಾಹಿತಿ ನೀಡಿದ್ದಾರೆ.
ಫುಲಾನಿ ಅಲೆಮಾರಿಗಳು ಈ ದಾಳಿ ಮಾಡಿರುವ ಬಗ್ಗೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗಷ್ಟೆ ವಾಯುವ್ಯ ಸುಕೊಟೋ ಪ್ರದೇಶದಲ್ಲಿ ದುಷ್ಕರ್ಮಿಗಳು ದಾಳಿ ನಡೆಸಿದ್ದು, ಕನಿಷ್ಠ 40 ಮಂದಿ ಮೃತಪಟ್ಟಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss