ವಯಸ್ಸು ಜಸ್ಟ್‌ ನಂಬರ್‌ ಅಷ್ಟೆ: 61 ವರ್ಷದ ವ್ಯಕ್ತಿಯ ಕೈಹಿಡಿದಳು 18ರ ಯುವತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್‌ 
ಮದುವೆ ವಿಚಾರದಲ್ಲಿ ಗಂಡು ಹೆಣ್ಣಿನ ಒಪ್ಪಿಗೆ, ಎರಡು ಕುಟುಂಬಗಳ ನಡುವಿನ ಒಡನಾಟಕ್ಕಿಂತ ಮೊದಲು ಗಮನಿಸುವುದು ವಯಸ್ಸಿನ ಅಂತರ. ಕೆಲವರು ಸಣ್ಣ ಮಟ್ಟದ ವಯಸ್ಸಿನ ಅಂತರಕ್ಕೆ ಒಪ್ಪಿಗೆ ಸೂಚಿಸಿದರೆ, ಇನ್ನು ಕೆಲವರು ವಯಸ್ಸಿನ ಅಂತರವಿರಬಾರದಪ್ಪ ಎನ್ನುತ್ತಾರೆ. ಆದರೆ ಮತ್ತೆ ಕೆಲವರು ವಯಸ್ಸಿನ ವಿಚಾರಕ್ಕೆಲ್ಲ ತಲೆಕೆಡಿಸಿಕೊಳ್ಳದೆ ಪ್ರೀತಿ ಮುಂದೆ ಅವ್ಯಾವುದೂ ಲೆಕ್ಕಕ್ಕಿಲ್ಲ ಎಂದು ಪ್ರೇಮಲೋಕದಲ್ಲಿ ವಿಹರಿಸುತ್ತಾರೆ.
ನಾವು ಹೇಳಹೊರಟಿರುವುದು ಅಂತಹದ್ದೇ ಒಂದು ಜೋಡಿಯ ಬಗ್ಗೆ. ಈ ಸ್ಟೋರಿಯ ಮೂಲವಿರುವುದು ಪಾಕಿಸ್ತಾನದಲ್ಲಿ. ಅಲ್ಲಿ ಈಗಷ್ಟೇ 18 ಹರೆಯಕ್ಕೆ ಕಾಲಿಟ್ಟ  ಯುವತಿಯೊಬ್ಬಳು 61 ವರ್ಷದ ವ್ಯಕ್ತಿಯನ್ನು ಪ್ರೀತಿಸಿದ್ದಾಳೆ. ಆತನೇ ಬೇಕೆಂದು ಹಠ ಹಿಡಿದು ಇಷ್ಟಪಟ್ಟು ಮದುವೆಯನ್ನೂ ಆಗಿದ್ದಾಳೆ. ಹುಡುಗಿಯ ಹೆಸರು ಆಸಿಯಾ ಮತ್ತು ಆಕೆಯ ಪ್ರೇಮಿಯ ಹೆಸರು ಶಂಶಾದ್. ಇವರಿಬ್ಬರ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ ಆಗುತ್ತಿದೆ. ಇದಕ್ಕೆ ಕಾರಣ ಇವರಿಬ್ಬರ ನಡುವಿನ ವಯಸ್ಸಿನ ಅಂತರ. ಈ ಬಗ್ಗೆ ಯೂಟ್ಯೂಬ್‌ ಸಂದರ್ಶನವೊಂದರಲ್ಲಿ ಈ ಜೋಡಿ ಮನಬಿಚ್ಚಿ ಮಾತನಾಡಿದೆ.
ರಾವಲ್ಪಿಂಡಿ ಮೂಲದ ಶಂಶಾದ್‌ ಆಸಿಯಾಗಿಂತ 43 ವರ್ಷ ಹಿರಿಯ ವಯಸ್ಸಿನ ವ್ಯಕ್ತಿ. ಆತ ಸಾಮಾಜಿಕ ಸೇವೆಗಳಲ್ಲಿ ಸಕ್ರಿಯನಾಗಿ ತೊಡಗಿದ್ದ, ಬಡ ಹುಡುಗಿಯರಿಗೆ ಕಲ್ಯಾಣ  ಮಾಡಿಸುತ್ತಿದ್ದ, ಕಷ್ಟ ಎಂದವರರಿಗೆ ನೆರವಾಗುತ್ತಿದ್ದ. ಇದನ್ನೆಲ್ಲಾ ಗಮನಿಸುತ್ತಿದ್ದ 18ರ ಹುಡುಗಿ ಆಸಿಯಾಗೆ ಶಂಶಾದ್‌ ಮೇಲೆ ಪ್ರೀತಿ ಹುಟ್ಟಿದೆ. ಸರಳ ವ್ಯಕ್ತಿತ್ವದ ಆತ ಎಲ್ಲರೊಂದಿಗೆ ಬೆರೆಯುತ್ತಿದ್ದ, ಅಲ್ಲದೆ ಸ್ಥಳೀಯರು ಶಂಶಾದ್‌ ರನ್ನು ಬಂಧುವಿನಂತೆ ಕಾಣುತ್ತಿದ್ದರು. ಇವೆಲ್ಲವುಗಳಿಂದ ಆತನತ್ತ ಆಕರ್ಷಿತಳಾದ ಆಸಿಯಾ ಒಂದೆರಡು ಬಾರಿ ಶಂಶಾದ್ ರನ್ನು ಭೇಟಿಯಾಗಿದ್ದಳು. ಈ ವೇಳೆ ಆತನಲ್ಲಿ ಪ್ರೇಮನಿವೇದನೆ ಮಾಡಿಕೊಂಡಿದ್ದಾಳೆ.

ಆ ಬಳಿಕ ಮನೆಯವರ ವಿರೋಧವಿದ್ದರೂ ಆಸಿಯಾ ಹಠ ಹಿಡಿದು 61 ವರ್ಷದ ಶಂಶಾದ್ ರನ್ನು  ವರನ್ನೇ ಪತಿಯಾಗಿ ಸ್ವೀಕರಿಸಿದ್ದಾಳೆ. ಈ ಬಗ್ಗೆ ಮಾತನಾಡಿರುವ ಶಂಶಾದ್, ‘ಈ ವಯಸ್ಸಿನಲ್ಲಿ ನನಗೆ ಆಸಿಯಾಳಂತಹ ಇಂತಹ ಜೀವನ ಸಂಗಾತಿ ಸಿಕ್ಕಿರುವುದು ಅದೃಷ್ಟ ಎಂದಿದ್ದಾರೆ. ಇಂತಹ ಪತಿಯನ್ನು ಪಡೆದಿಯುವುದಕ್ಕೆ ಅದೃಷ್ಟ ಮಾಡಿದ್ದೆ ಎಂದು ಆಸಿಯಾ ಸಂಭ್ರಮ ಹಂಚಿಕೊಂಡಿದ್ದಾಳೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!