ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಡಿಜಿಟಲ್ ಹಣ ಎಷ್ಟು ಸುರಕ್ಷಿತ, ಅಷ್ಟೇ ಡೇಂಜರ್ ಕೂಡ ಹೌದು ಅನ್ನೋದಕ್ಕೆ ಇಲ್ಲೊಂದು ಉದಾಹರಣೆ ಇದೆ. ಜರ್ಮನಿ ಮೂಲದ ಸ್ಟೆಫನ್ ಥಾಮಸ್ ಎಂಬಾತ ತನ್ನ ಬಳಿ 1,800 ಕೋಟಿ ರೂ.ಗಳಷ್ಟು ಹಣವಿದ್ದರೂ ಅದನ್ನು ಖರ್ಚು ಮಾಡಲಾಗದ ಪರಿಸ್ಥಿತಿಗೆ ತಲುಪಿದ್ದಾನೆ.
ಹೌದು. ಥಾಮಸ್ ಬಳಿ 1800 ಕೋಟಿ ಮೌಲ್ಯದ 7,002 ಬಿಟ್ ಕಾಯಿನ್ಗಳಿವೆ. ಆದರೆ ಅವುಗಳನ್ನು ಬಳಸುವ ಪಾಸ್ ವರ್ಡ್ ನ್ನೇ ಕಳೆದುಕೊಂಡಿದ್ದಾರೆ!
ಥಾಮಸ್ ತಮ್ಮ ಪಾಸ್ ವರ್ಡ್ ಅನ್ನು ಐರನ್ ಕೀ ಎನ್ನುವ ಆಯಪ್ ನಲ್ಲಿ ಶೇಖರಿಸಿದ್ದರಂತೆ. ಈ ಆಯಪ್ ನಲ್ಲಿ 10 ಬಾರಿ ತಪ್ಪು ಪಾಸ್ ವರ್ಡ್ ನಮೂದಿಸಿದರೆ ಅವರು ಶೇಖರಿಸಿರುವ ದಾಖಲೆಗಳು ತಾನಾಗಿಯೇ ಡಿಲೀಟ್ ಆಗುತ್ತವೆ. ಐರನ್ ಕೀ ಪಾಸ್ ವರ್ಡ್ ಮರೆತ ಥಾಮಸ್, ಈಗ ಬಿಟ್ ಕಾಯಿನ್ ಪಾಸ್ ವರ್ಡ್ ನ್ನೂ ಕಳೆದುಕೊಂಡಿದ್ದಾರೆ.
ಈಗಾಗಲೇ ಥಾಮಸ್ ಗೆ 10 ಸಲ ಪಾಸ್ ವರ್ಡ್ ಟೈಪ್ ಮಾಡಿ ಐರನ್ ಕೀ ತೆರೆಯಲು ಅವಕಾಶ ನೀಡಲಾಗಿದ್ದು, 8 ಸಲ ತಪ್ಪು ಪಾಸ್ ವರ್ಡ್ ಬಳಸಿ ಕೀ ತೆರಯುವಲ್ಲಿ ವಿಫಲರಾಗಿದ್ದಾರೆ. ಇನ್ನೂ ಎರಡು ಅವಕಾಶ ಮಾತ್ರ ಇದ್ದು, ಒಂದು ವೇಳೆ ಪಾಸ್ ವರ್ಡ್ ತಪ್ಪಾದರೆ 1,800 ಕೋಟಿ ರೂ. ಹಣ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗುತ್ತದೆ.