ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸದಿಗಂತ ಆನ್ಲೈನ್ ಡೆಸ್ಕ್:
ಸೆಪ್ಟೆಂಬರ್ 20ರಿಂದ 30ರವರೆಗೆ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ದೇಶಾದ್ಯಂತ ಪ್ರತಿಪಕ್ಷಗಳು ಜಂಟಿ ಪ್ರತಿಭಟನೆ ಮಾಡಲಿವೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನಡೆಸಿದ ವರ್ಚುಯಲ್ ಸಭೆಯ ನಂತರ 19 ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಜಂಟಿ ಪ್ರತಿಭಟನೆ ಮಾಡುವುದಾಗಿ ತಿಳಿಸಿದೆ
‘ಜಾತ್ಯತೀತ, ಪ್ರಜಾಪ್ರಭುತ್ವ, ಗಣರಾಜ್ಯದ ಆದೇಶವನ್ನು ನಮ್ಮ ಎಲ್ಲಾ ಶಕ್ತಿಯಿಂದ ರಕ್ಷಿಸಲು ಭಾರತದ ಜನರಿಗೆ ಕರೆ ನೀಡುತ್ತೇವೆ. ಉತ್ತಮ ನಾಳೆಗಾಗಿ ಭಾರತವನ್ನು ಬದಲಾಯಿಸಬೇಕು’ ಎಂದು 19 ಪ್ರತಿಪಕ್ಷದ ನಾಯಕರು ಕರೆ ನೀಡಿದ್ದಾರೆ.
ಕೇಂದ್ರ ಸರ್ಕಾರದ ಮುಂದೆ ಪ್ರತಿಪಕ್ಷಗಳು 11 ಅಂಶಗಳ ಬೇಡಿಕೆ ಪಟ್ಟಿ ಸಲ್ಲಿಸಿದ್ದು, ಮುಂಗಾರು ಅಧಿವೇಶನ ವಾಶ್ ಔಟ್ ನ್ನು ಖಂಡಿಸಿದ್ದಾರೆ.