ಹೊಸದಿಗಂತ ಆನ್ಲೈನ್ ಡೆಸ್ಕ್:
1993ರ ಮುಂಬೈ ಸರಣಿ ಬ್ಲಾಸ್ಟ್ಗೆ ಸಂಬಂಧಿಸಿದ ಪ್ರಮುಖ ಆರೋಪಿ ನೂರ್ ಮೊಹಮ್ಮದ್ ಖಾನ್ ಮೃತಪಟ್ಟಿದ್ದಾರೆ.
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಮೊಹಮ್ಮದ್ ಮುಂಬೈನ ನಿವಾಸದಲ್ಲಿ ಮೃತಪಟ್ಟಿದ್ದಾರೆ.
ಮುಂಬೈ ಸ್ಫೋಟದ ಸಂಚುಕೋರ ಟೈಗರ್ ಮೆಮೊನ್ನ ಆಪ್ತರಾಗಿದ್ದ ಖಾನ್ ವೃತ್ತಿಯಲ್ಲಿ ಬಿಲ್ಡರ್. ತನ್ನ ಗೋದಾಮಿನಲ್ಲಿ 58 ಆರ್ಡಿಎಸ್ ಸ್ಫೋಟಕಗಳನ್ನು ದಾಸ್ತಾನು ಇಟ್ಟುಕೊಂಡಿದ್ದ ಆರೋಪ ಆತನ ಮೇಲಿತ್ತು. ವಿಚಾರಣೆ ನಡೆಸಿದ ವಿಶೇಷ ‘ಟಾಡಾ’ ನ್ಯಾಯಾಲಯ, 2006ರ ನವೆಂಬರ್ 24ರಂದು ಆತ ದೋಷಿ ಎಂದು ತೀರ್ಪು ನೀಡಿತ್ತು ಹಾಗೂ ಆತನಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.