Monday, July 4, 2022

Latest Posts

2ನೇ ಹಂತದ ಗ್ರಾಮ ಪಂಚಾಯತಿಗಳ ಚುನಾವಣೆ: 5084 ನಾಮಪತ್ರ ಸಲ್ಲಿಕೆ

ಹೊಸ ದಿಗಂತ ವರದಿ, ಬಾಗಲಕೋಟೆ:

ಜಿಲ್ಲೆಯಲ್ಲಿ ಎರಡನೇ ಹಂತದ ಗ್ರಾಮ ಪಂಚಾಯತಿಗಳ ಚುನಾವಣೆಗೆ ಡಿಸೆಂಬರ 11 ರಿಂದ 16 ವರೆಗೆ ಒಟ್ಟು 5084 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.
ಎರಡನೇ ಹಂತದ ಬಾಗಲಕೋಟೆ ಉಪವಿಭಾಗ ವ್ಯಾಪ್ತಿಯಲ್ಲಿ ಬರುವ 102 ಗ್ರಾಮ ಪಂಚಾಯತಿಗಳ 1547 ಸ್ಥಾನಗಳಿಗೆ ಒಟ್ಟು 5084 ನಾಮಪತ್ರ ಸಲ್ಲಿಕೆಯಾಗಿದ್ದು, ಈ ಪೈಕಿ ಅನುಸೂಚಿತ ಜಾತಿಯ ಸಾಮಾನ್ಯ ಕ್ಷೇತ್ರದಿಂದ 402, ಮಹಿಳಾ ಕ್ಷೇತ್ರದಿಂದ 525, ಅನುಸೂಚಿತ ಪಂಗಡದ ಸಾಮಾನ್ಯ ಕ್ಷೇತ್ರದಿಂದ 133, ಮಹಿಳಾ ಕ್ಷೇತ್ರದಿಂದ 265, ಹಿಂದುಳಿದ ಅ ವರ್ಗದ ಸಾಮಾನ್ಯ ಕ್ಷೇತ್ರದಿಂದ 342, ಮಹಿಳಾ ಕ್ಷೇತ್ರದಿಂದ 463, ಹಿಂದುಳಿದ ಬಿ ವರ್ಗದ ಸಾಮಾನ್ಯ ಕ್ಷೇತ್ರದಿಂದ 131, ಮಹಿಳಾ ಕ್ಷೇತ್ರದಿಂದ 71, ಸಾಮಾನ್ಯ ವರ್ಗದ ಸಾಮಾನ್ಯ ಕ್ಷೇತ್ರದಿಂದ 1736, ಮಹಿಳಾ ಕ್ಷೇತ್ರದಿಂದ 1016 ನಾಮಪತ್ರ ಸಲ್ಲಿಕೆಯಾಗಿವೆ.
ಬಾಗಲಕೋಟೆ ತಾಲೂಕಿನಿಂದ 28 ಗ್ರಾಮ ಪಂಚಾಯತಿಗಳ 407 ಸ್ಥಾನಕ್ಕೆ 1374, ಹುನಗುಂದ ತಾಲೂಕಿನ 16 ಗ್ರಾಮ ಪಂಚಾಯತಿಗಳ 226 ಸ್ಥಾನಗಳಿಗೆ 762, ಬಾದಾಮಿ ತಾಲೂಕಿನ 30 ಗ್ರಾಮ ಪಂಚಾಯತಿಗಳ 483 ಸ್ಥಾನಗಳಿಗೆ 1543, ಇಳಕಲ್ಲ ತಾಲೂಕಿನ 16 ಗ್ರಾಮ ಪಂಚಾಯತಿಗಳ 275 ಸ್ಥಾನಗಳಿಗೆ 938 ಹಾಗೂ ಗುಳೇದಗುಡ್ಡ ತಾಲೂಕಿನ 12 ಗ್ರಾಮ ಪಂಚಾಯತಿಗಳ 156 ಸ್ಥಾನಗಳಿಗೆ 467 ನಾಮಪತ್ರಗಳು ಸಲ್ಲಿಕೆಯಾಗಿವೆ. ನಾಮಪತ್ರ ಪರಿಶೀಲನೆ ಡಿಸೆಂಬರ 17 ರಂದು ನಡೆಸಲಾಗಿದ್ದು, ನಾಮಪತ್ರ ಹಿಂಪಡೆಯಲು ಡಿ.19 ಕೊನೆಯ ದಿನವಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss