ಅದಾನಿ ಸಮೂಹದಿಂದ 2.5 ಬಿಲಿಯನ್‌ ಡಾಲರ್‌ ಸಾಲ ಪೂರ್ವಪಾವತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಹಿಂಡೆನ್ ಬರ್ಗ್‌ ವಿವಾದದಿಂದ ಷೇರು ಮಾರುಕಟ್ಟೆಯಲ್ಲಿ ಭಾರೀ ನಷ್ಟ ಅನುಭವಿಸಿದ್ದ ಅದಾನಿ ಸಮೂಹವು ಹೂಡಿಕೆದಾರರಿಗೆ ಭರವಸೆ ತುಂಬಲು ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದ್ದು ಇದೀಗ 2.5 ಬಿಲಿಯನ್‌ ಡಾಲರ್‌ ಮೌಲ್ಯದ ಸಾಲವನ್ನು ಪೂರ್ವಪಾವತಿ ಮಾಡಿರುವುದಾಗಿ ಹೇಳಿದೆ.

ಈ ಹಿಂದೆಯೂ ಸಾವಿರಾರು ಕೋಟಿ ರೂ. ಮೌಲ್ಯದ ಸಾಲವನ್ನು ಅದಾನಿ ಸಮೂಹ ಪಾವತಿಸಿರುವುದಾಗಿ ಹೇಳಿಕೊಂಡಿದ್ದು ಪ್ರಸ್ತುತ ಮಾ.31ರ ಗಡುವಿನ ಸಾಲವನ್ನು ಪೂರ್ವಪಾವತಿ ಯೋಜನೆಯ ಭಾಗವಾಗಿ ತೀರಿಸಿದೆ.

ಗೌತಮ್ ಅದಾನಿ ಒಡೆತನದ ಅದಾನಿ ಸಮೂಹ ಸಂಸ್ಥೆಯು ಅಂಬುಜಾ ಸಿಮೆಂಟ್ಸ್ ಸ್ವಾಧೀನ ಪಡಿಸಿಕೊಳ್ಳುವಿಕೆಗೆ ತೆಗೆದುಕೊಂಡ 500 ಮಿಲಿಯನ್ ಡಾಲರ್‌ ಸಾಲ ಸೌಲಭ್ಯವನ್ನು ಸಹ ಪೂರ್ವಪಾವತಿ ಮಾಡಲಾಗಿದೆ ಎಂದು ಹೇಳಿದೆ. ಅದಾನಿ ಗ್ರೂಪ್ ಕಳೆದ ವರ್ಷ 10.5 ಶತಕೋಟಿ ಡಾಲರ್‌ ಮೌಲ್ಯದಲ್ಲಿ ಭಾರತದಲ್ಲಿ Holcim AG ಯ ಅಂಬುಜಾ ಸಿಮೆಂಟ್ಸ್ ಮತ್ತು ACC ಲಿಮಿಟೆಡ್ ಸಿಮೆಂಟ್ ವ್ಯವಹಾರಗಳನ್ನು ಸ್ವಾಧೀನಪಡಿಸಿಕೊಂಡಿತು. ಈ ಸ್ವಾಧೀನ ಪಡಿಸಿಕೊಳ್ಳುವಿಕೆಗೆ ತೆಗೆದುಕೊಂಡ ಸಾಲದಲ್ಲಿ ಪ್ರಸ್ತುತ 2.5 ಬಿಲಿಯನ್‌ ಡಾಲರ್‌ ಸಾಲವನ್ನು ಅದಾನಿ ಸಮೂಹ ತೀರಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!