ವಿಜಯಪುರ ಅಲಿಯಾಬಾದ್ ಗ್ರಾಮದಲ್ಲಿ 2.5 ತೀವ್ರತೆಯಲ್ಲಿ ಭೂಕಂಪ: ಭೀತಿಗೊಂಡ ಜನ

ಹೊಸದಿಗಂತ ವರದಿ ವಿಜಯಪುರ:

ವಿಜಯಪುರ ತಾಲೂಕಿನ ಅಲಿಯಾಬಾದ್ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ 9.48 ಗಂಟೆಗೆ 2.5 ತೀವ್ರತೆಯಲ್ಲಿ ಭೂಕಂಪನ ಸಂಭವಿಸಿದ್ದು, ಗ್ರಾಮಸ್ಥರು ಭೀತಿಗೊಳ್ಳುವಂತಾಗಿದೆ.

ಗ್ರಾಮದಲ್ಲಿ ಭಾರಿ ಸದ್ದಿನೊಂದಿಗೆ ಭೂಮಿಕಂಪಿಸಿದ್ದಕ್ಕೆ ಜನರು ಆತಂಕಗೊಳ್ಳುವಂತಾಗಿದೆ.

ಇಲ್ಲಿನ ಅಲಿಯಾಬಾದ್ ಭೂಕಂಪನ ಕೇಂದ್ರ ಬಿಂದುವಾಗಿದ್ದು, ಬರಟಗಿ, ಇಂಗನಾಳ, ದ್ಯಾಬೇರಿ ಸೇರಿದಂತೆ ನಗರದ ಕೆಲ ಬಡವಾವಣೆ ಜನರೂ ಭೂಕಂಪನದ ಅನುಭವಕ್ಕೆ ಬೆಚ್ಚಿಬೀಳುವಂತಾಗಿದೆ.

ಅಲಿಯಾಬಾದ್ ಗ್ರಾಮದಲ್ಲಿ ಸಂಭವಿಸಿದ ಭೂಕಂಪನ 2.5 ತೀವ್ರತೆಯಲ್ಲಿ ದಾಖಲಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರದವರು ದೃಢಪಡಿಸಿದ್ದಾರೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!