ಹೊಸದಿಗಂತ ವರದಿ, ವಿಜಯಪುರ:
ಇಲ್ಲಿನ ಜಿಲ್ಲಾಸ್ಪತ್ರೆಗೆ ಹೆರಿಗೆಗೆಂದು ದಾಖಲಾಗಿದ್ದ ಮಹಿಳೆಯ ಬ್ಲಡ್ ಗ್ರುಪ್ ಚೆಕ್ ಮಾಡುವ ವೇಳೆ, ಎರಡೆರಡು ಬೇರೆ ಬೇರೆ ರಿಪೊರ್ಟ್ ನೀಡಿ, ಸಿಬ್ಬಂದಿ ಯಡವಟ್ಟು ಸೃಷ್ಟಿಸಿದ ಘಟನೆ ನಡೆದಿದೆ.
ಒಂದೇ ಮಹಿಳೆಯ ಬ್ಲಡ್ ಟೆಸ್ಟ್ ಎರಡು ಬಾರಿ ಮಾಡಿಸಿದಾಗ, ಎರಡು ಬಾರಿ ಬೇರೆ ಬೇರೆ ರಿಪೊರ್ಟ್ ಕೊಡಲಾಗಿದ್ದು, ಇದನ್ನು ಕಂಡ ಗರ್ಭಿಣಿ ವಿಜಯಲಕ್ಷ್ಮೀ ಪತಿ ಶ್ರೀಶೈಲ ಬಂಡರಕೋಟಿ ಗಾಬರಿಗೊಂಡಿದ್ದಾರೆ.
ಜಿಲ್ಲೆಯ ಲೋಣಿ ಬಿಕೆ ಗ್ರಾಮದ ವಿಜಯಲಕ್ಷ್ಮೀ ಎಂಬವರು ಹೆರಿಗೆಗೆ ಬಂದಿದ್ದು, ಹೆರಿಗೆ ಆಸ್ಪತ್ರೆಯ ಲ್ಯಾಬ್ ನಲ್ಲಿ ಬ್ಲಡ್ ಗ್ರುಪ್ ಚೆಕ್ ಮಾಡಿಸಿದಾಗ, ಎರಡೆರಡು ರಿಪೊರ್ಟ್ ನೀಡಿದ ಅಚಾತುರ್ಯ ನಡೆದಿದೆ.
ಮೊದಲಿಗೆ ಫೆ.23, 2021 ರಂದು ಚೆಕ್ ಮಾಡಿಸಿದಾಗ, ಎ ಪಾಸಿಟಿವ್ ಎಂದು ರಿಪೊರ್ಟ್ ನೀಡಲಾಗಿದೆ. ಅನಂತರ ಮಾ.11, 2021 ರಂದು ಮತ್ತೆ ಚೆಕ್ ಮಾಡಿದಾಗ, ಬಿ ಪಾಸಿಟಿವ್ ರಿಪೊರ್ಟ್ ನೀಡಲಾಗಿದ್ದು, ಈ ಎಡವಟ್ಟು ಸೃಷ್ಟಿಸಿದಕ್ಕೆ ಜಿಲ್ಲಾಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳ ವಿರುದ್ಧ ಗರ್ಭಿಣಿಯ ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ದಾರೆ.