ದಾಲ್‌ ಸರೋವರದಲ್ಲಿ ಅಗ್ನಿ ಅವಘಡ: ಎರಡು ಹೌಸ್‌ ಬೋಟ್‌ ಗಳು ಸುಟ್ಟು ಭಸ್ಮ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜಮ್ಮು ಕಾಶ್ಮೀರದ ಶ್ರೀನಗರದಲ್ಲಿನ ದಾಲ್‌ ಸರೋವರದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಎರಡು ಹೌಸ್‌ ಬೋಟ್‌ ಗಳು ಸಂಪೂರ್ಣ ಭಸ್ಮಗೊಂಡಿರುವ ಘಟನೆ ನಡೆದಿದೆ.
ಅಪೊಲೊ XI ಹಾಗೂ ನ್ಯೂಜಿಲೆಂಡ್‌ ಹೆಸರಿನ ಎರಡು ಹೌಸ್‌ ಬೋಟ್‌ ಗಳು ಬೆಂಕಿಯಲ್ಲಿ ಸುಟ್ಟು ಭಸ್ಮಗೊಂಡಿವೆ.
ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯರು, ಪೊಲೀಸರು, ಸಿಆರ್‌ಪಿಎಫ್‌ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಈ ಅವಘಡದಿಂದ ಸುಮಾರು 5 ಕೋಟಿ ರೂ ನಷ್ಟವಾಗಿದೆ ಎಂದು ಕಾಶ್ಮೀರ ಹೌಸ್‌ ಬೋಟ್‌ ಅಸೋಸಿಯೇಷನ್‌ ತಿಳಿಸಿದೆ.
ಅಗ್ನಿ ಅವಘಡಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ ಪ್ರದೇಶದಲ್ಲಿ ಅಗ್ನಿ ಶಾಮಕದಳದ ತುರ್ತು ಸೇವೆ ನಿಯೋಜಿಸಲಾಗಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!