ಮದುವೆ ಮನೆಯಲ್ಲಿ ದುರಂತ: ಸಿಲಿಂಡರ್‌ ಸ್ಫೋಟಕ್ಕೆ ಇಬ್ಬರು ಮಕ್ಕಳು ಸಾವು, 60ಮಂದಿಗೆ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭುಂಗ್ರಾ ಗ್ರಾಮದಲ್ಲಿ ಮದುವೆಯ ವೇಳೆ ಮನೆಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ಸುಮಾರು 60 ಮಂದಿ ಗಾಯಗೊಂಡಿದ್ದಾರೆ. ಇದು ತುಂಬಾ ಗಂಭೀರ ಅಪಘಾತ. ಗಾಯಗೊಂಡ 60 ಮಂದಿಯಲ್ಲಿ 52 ಮಂದಿಯನ್ನು ಎಂಜಿಎಚ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಹಿಮಾಂಶು ಗುಪ್ತಾ ತಿಳಿಸಿದರು.

ಜೋಧ್‌ಪುರದ ಮದುವೆ ಸಮಾರಂಭದಲ್ಲಿ ಐದು ಗ್ಯಾಸ್ ಸಿಲಿಂಡರ್‌ಗಳು ಸಿಡಿದ ಪರಿಣಾಮ 60 ಜನರು ಗಾಯಗೊಂಡಿದ್ದಾರೆ ಮತ್ತು ಒಂದೂವರೆ ವರ್ಷದ ಪುಟ್ಟ ಮಗು ಸಾವನ್ನಪ್ಪಿದೆ. ಶೇರ್ಗಢ್ ಸಮೀಪದ ಭುಂಗ್ರಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ತಖ್ತ್ ಸಿಂಗ್ ಮನೆಯಲ್ಲಿ ಮದುವೆ ಮೆರವಣಿಗೆಯು ಮನೆಯಿಂದ ಹೊರಡುವ ಹಂತದಲ್ಲಿದ್ದಾಗ ಇದ್ದಕ್ಕಿದ್ದಂತೆ ಸಿಲಿಂಡರ್‌ಗಳು ಸ್ಫೋಟಗೊಂಡಿವೆ.

ಎಂಜಿಎಚ್ ಆಸ್ಪತ್ರೆಯಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, 49 ಮಂದಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಒಬ್ಬ ರೋಗಿಯು ಐಸಿಯುನಲ್ಲಿದ್ದಾರೆ ಮತ್ತು 10 ಜನರು 90% ಕ್ಕಿಂತ ಹೆಚ್ಚು ಸುಟ್ಟಗಾಯಗಳಿಂದ ಬಳಲುತ್ತಿದ್ದಾರೆ. ಹದಿನೈದರಿಂದ 20 ಮಂದಿಗೆ ಶೇ.50ಕ್ಕಿಂತ ಕಡಿಮೆ ಸುಟ್ಟ ಗಾಯಗಳಾಗಿದ್ದು, 17 ಮಂದಿಯನ್ನು ಚಿಕಿತ್ಸೆ ಬಳಿಕ ಡಿಸ್ಚಾರ್ಜ್ ಮಾಡಲಾಗಿದೆ. ಗಾಯಗೊಂಡವರನ್ನು ಶೇರ್ಗಢ್‌ಗೆ ಕರೆತರಲಾಯಿತು. ಕೆಲವರನ್ನು ಇಲ್ಲಿನ ಮಹಾತ್ಮಗಾಂಧಿ ಆಸ್ಪತ್ರೆಯ ಸುಟ್ಟಗಾಯ ಘಟಕಕ್ಕೆ ರೆಫರ್ ಮಾಡಲಾಗಿತ್ತು. ಸುಮಾರು ಐದು ಸಿಲಿಂಡರ್‌ಗಳು ಸ್ಫೋಟಗೊಂಡಿವೆ ಎಂದು ಗ್ರಾಮಾಂತರ ಎಸ್ಪಿ ಅನಿಲ್ ಕಯಾಲ್ ತಿಳಿಸಿದ್ದಾರೆ. ಅಡುಗೆ ಮಾಡುವಾಗ ಸಿಲಿಂಡರ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿದುಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!