ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚೆಗೆ ಬಾಲಕಿ ಬಲಿ ಪಡೆದಿದ್ದ ಬಿಬಿಎಂಪಿ ಕಸದ ಲಾರಿಗೆ ಇದೀಗ 60 ವರ್ಷದ ವೃದ್ಧರೊಬ್ಬರು ಸಿಕ್ಕಿ ಸಾವನ್ನಪ್ಪಿರುವ ಘಟನೆ ನಡೆದಿದೆ.
10 ದಿನಗಳ ಹಿಂದೆ ಹೆಬ್ಬಾಳದ ಅಕ್ಷಯಾ ಬಾಲಕಿಯೊಬ್ಬಳು ಬಿಬಿಎಂಪಿಯ ಕಸದ ಲಾರಿಯ ಹರಿದು ಬಾಲಕಿಯೊಬ್ಬಳು ಮೃತಪಟ್ಟ ಘಟನೆ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ದುರ್ಘಟನೆ ನಡೆದಿದೆ.
ಬೆಂಗಳೂರಿನ ಬೇಗೂರು ಕ್ರಾಸ್ ಬಳಿಯ ರೇವಾ ವಿವಿಯ ಬಳಿಯಲ್ಲಿ ಕಸದ ಲಾರಿ ಬೈಕ್ ಗೆ ಡಿಕ್ಕಿಯೊಡೆದು ರಾಮಯ್ಯ (60) ಎಂಬುವರು ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ. ರಾಮಯ್ಯ ದೇಹ ಮೇಲೆಯೇ ಕಸದ ಲಾರಿ ಹರಿದ ಪರಿಣಾಮ, ಅವರ ದೇಹ ಛಿದ್ರವಾಗಿರೋದಾಗಿ ತಿಳಿದು ಬಂದಿದೆ.