ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, August 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಪ್ರತಿವರ್ಷ 2 ಲಕ್ಷ ಗೋವುಗಳನ್ನು ರಕ್ಷಣೆ ಮಾಡಬೇಕು, ನನಗೆ ಇದೇ ಇಲಾಖೆಯಲ್ಲೇ ಇರಬೇಕೆಂಬ ಆಸೆ ಇದೆ: ಸಚಿವ ಪ್ರಭು ಚೌಹಾಣ್​​​

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಪ್ರತಿವರ್ಷವೂ 2 ಲಕ್ಷ ಗೋವುಗಳನ್ನು ರಕ್ಷಣೆ ಮಾಡಬೇಕು. ಇನ್ನು ಎರಡು ವರ್ಷ ಇದೇ ಇಲಾಖೆಯಲ್ಲಿ ಇರುತ್ತೇನೆ. ನನಗೆ ಬೇರೆ ಇಲಾಖೆಗಳು ಬೇಕಿಲ್ಲ. ನನಗೆ ಇದೇ ಇಲಾಖೆಯಲ್ಲೇ ಇರಬೇಕೆಂಬ ಆಸೆ ಇದೆ. ಆದರೆ ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಂಡರೂ ಬದ್ಧನಾಗಿರುತ್ತೇನೆ ಎಂದು ಬೆಂಗಳೂರಿನಲ್ಲಿ ಸಚಿವ ಪ್ರಭು ಚೌಹಾಣ್​​​ ಹೇಳಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಚಿವ ಸಂಪುಟದಿಂದ ಸಚಿವ ಪ್ರಭು ಚೌಹಾಣ್ ಅವರನ್ನು ಕೈಬಿಡುವ ವಿಚಾರವಾಗಿ ಸುದ್ದಿ ಹರಿದಾಡುತ್ತಿದ್ದು, ಈ ಕುರಿತು ಪ್ರತಿಕ್ರಿಯೆ ನೀಡಿ, ‘ನನಗೆ ಪಶು ಸಂಗೋಪನಾ ಇಲಾಖೆಯೇ ಬಹುಪ್ರಿಯ. ಇಲ್ಲೇ ಮುಂದುವರೆಯಲು ಇಚ್ಛಿಸುತ್ತೇನೆ. ಆದರೆ ಪಕ್ಷದ ಹೈಕಮಾಂಡ್ ನಿರ್ಧಾರಗಳಿಗೆ ಬದ್ಧನಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಪಶುಸಂಗೋಪನೆ ಇಲಾಖೆಯಲ್ಲಿ ವೈದ್ಯರ ಕೊರತೆ ವಿಚಾರವಾಗಿ 1,200 ಪಶುವೈದ್ಯರ ಅವಶ್ಯಕತೆ ಇದೆ. ಸದ್ಯ 300 ಮಂದಿಯ ನೇಮಕಾತಿಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆರ್ಥಿಕ ಇಲಾಖೆಯಿಂದ ಗ್ರೀನ್ ಸಿಗ್ನಲ್ ಸಿಕ್ಕ ಕೂಡಲೇ ನೇಮಕಾತಿ ಮಾಡುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಸರ್ಕಾರದ ವತಿಯಿಂದ ಪ್ರಾಣಿ ರಕ್ಷಣೆ ಮಂಡಳಿ ಸ್ಥಾಪಿಸಿದ್ದೇವೆ. 18 ಜಿಲ್ಲೆಗಳಲ್ಲಿ 1,962 ಪಶು ಸಂಜೀವಿನಿ ಆಯಂಬುಲೆನ್ಸ್​ಗಳನ್ನು ಆರಂಭಿಸಿದ್ದು ಹಳ್ಳಿಗರಿಗೆ ಸಹಕಾರಿಯಾಗಲಿದೆ. ಹೈನುಗಾರರು ಅಗತ್ಯಬಿದ್ದಲ್ಲಿ ಈ ಪಶು ಆಯಂಬುಲೆನ್ಸ್​ಗಳನ್ನು ಕೂಡಲೇ ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ಗೋಹತ್ಯಾ ನಿಷೇಧ ಕಾನೂನು ಅಭಿವೃದ್ಧಿಯಾಗುತ್ತಿದೆ. ಜಾನುವಾರು ಹತ್ಯಾ ನಿಷೇಧ ಬಗ್ಗೆ ನಾನು ಕೂಡ ಎಲ್ಲಾ ಕಡೆ ಅರಿವು ಮೂಡಿಸುತ್ತಿದ್ದೇನೆ. ಪ್ರತಿ ಜಿಲ್ಲೆಗೆ ಒಂದು ಗೋಶಾಲಾ ಸ್ಥಾಪಿಸಲಾಗುವುದು. ಅಕ್ಟೋಬರ್ ಒಳಗೆ 20ರೊಳಗೆ ಗೋಶಾಲೆಗಳ ಸ್ಥಾಪನೆಗೆ ಯೋಜನೆ ರೂಪಿಸಲಾಗಿದೆ. ಸದ್ಯ ರಾಜ್ಯದಲ್ಲಿ 188 ಖಾಸಗಿ ಗೋಶಾಲೆಗಳು ಕಾರ್ಯನಿರ್ವಹಿಸುತ್ತಿದೆ. ಜತೆಗೆ ಎಲ್ಲಾ ಜಿಲ್ಲೆಗಳಲ್ಲಿ ಅಗತ್ಯ ಪ್ರಮಾಣದ ಮೇವು ದಾಸ್ತಾನು ಇದ್ದು, ಜಿಲ್ಲಾಧಿಕಾರಿಗಳ ಜತೆ ಈ ಕುರಿತು ಸಂಪರ್ಕದಲ್ಲಿದ್ದೇನೆ ಎಂದು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss