ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್ ವುಡ್ ನ ಬಹು ನಿರೀಕ್ಷೆಯ ಚಿತ್ರಗಳಾದ ಲವ್ ಮಾಕ್ಟೇಲ್ 2 ಹಾಗೂ ಓಲ್ಡ್ ಮಾಂಕ್ ಈಗ ಒಂದೇ ದಿನ ಬಿಡುಗಡೆಯಾಗಲು ಸಜ್ಜಾಗಿದೆ.
ಎರಡೂ ಚಿತ್ರತಂಡಗಳು ಸಿನಿಮಾ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದು, ಫೆ. 11 ರಂದು ಪ್ರೇಮಿಗಳ ಚಿತ್ರಗಳು ತೆರೆ ಮೇಲೆ ರಂಜಿಸಲಿದೆ.
ಲವ್ ಮಾಕ್ಟೇಲ್ ನಲ್ಲಿ ಡಾರ್ಲಿಗ್ ಕೃಷ್ಣ ಜತೆಗೆ ನಟಿ ರಚೆಲ್ ಡೇವಿಡ್ ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಓಲ್ಡ್ ಮಾಂಕ್ ನಲ್ಲಿ ನಟ ಶ್ರೀನೀ ಹಾಗೂ ಅದಿತಿ ಪ್ರಭುದೇವ ಕಾಣಿಸಿಕೊಳ್ಳಲಿದ್ದಾರೆ.
ಪ್ರೇಮಿಗಳ ದಿನಕ್ಕೂ ಮುನ್ನ ಈ ಲವ್ ಸ್ಟೋರಿ ಆಧಾರಿತ ಚಿತ್ರಗಳು ಬೆಳ್ಳಿ ತೆರೆಮೇಲೆ ಬರಲಿದ್ದು, ಅಭಿಮಾನಿಗಳು ಚಿತ್ರಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ.