spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

1 ಟೆಸ್ಟ್ ಬದಲಿಗೆ 2 ಟಿ20 ಪಂದ್ಯ: ಇಂಗ್ಲೆಂಡ್​ಗೆ ಬಿಸಿಸಿಐಯಿಂದ ಆಫರ್!

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಭಾರತ-ಇಂಗ್ಲೆಂಡ್ ನಡುವಣ ಐದನೇ ಟೆಸ್ಟ್​ ಪಂದ್ಯದ ರದ್ದಾದ ಬಳಿಕ ಬಿಸಿಸಿಐ ಐಪಿಎಲ್​ನತ್ತ ಗಮನ ಕೇಂದ್ರೀಕರಿಸಿದರೆ, ಇತ್ತ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ (ECB)​​ ನಷ್ಟದ ಲೆಕ್ಕಚಾರದಲ್ಲಿ ತೊಡಗಿಸಿಕೊಂಡಿದೆ.
ಐದನೇ ಟೆಸ್ಟ್ ಪಂದ್ಯದ ರದ್ದಿನಿಂದ ಇಸಿಬಿಗೆ ಸುಮಾರು 400 ಕೋಟಿ ನಷ್ಟವಾಗಿದೆ ಎಂದು ತಿಳಿಸಿದೆ. ನೇರ ಪ್ರಸಾರದ ಹಕ್ಕಿನಿಂದ 300 ಕೋಟಿ ಮತ್ತು ಟಿಕೆಟ್ ಮಾರಾಟದಿಂದ 100 ಕೋಟಿ ನಷ್ಟವಾಗಿದೆ ಎಂದು ಇಸಿಬಿ ವಾದ ಮುಂದಿಟ್ಟಿದೆ.
ಅಷ್ಟೇ ಅಲ್ಲದೆ ಈ ಬಗ್ಗೆ ಐಸಿಸಿಗೂ (ICC) ದೂರು ನೀಡಿದೆ. ಆದರೆ ಇತ್ತ ಬಿಸಿಸಿಐ ಪಂದ್ಯವನ್ನು ಮರು ಆಯೋಜಿಸುವ ಬಗ್ಗೆ ಖಾತರಿ ನೀಡಿದೆ. ಈ ಬಗ್ಗೆ ಮಾತನಾಡಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮುಂದಿನ ವರ್ಷದ ಇಂಗ್ಲೆಂಡ್ ಪ್ರವಾಸದಲ್ಲಿ ರದ್ದಾಗಿರುವ ಪಂದ್ಯವನ್ನು ಆಡುವುದಾಗಿ ತಿಳಿಸಿದ್ದಾರೆ.
ಇದರ ಜೊತೆಗೆ ಎರಡು ಆಯ್ಕೆಗಳನ್ನು ಮುಂದಿಟ್ಟಿರುವುದಾಗಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಬಹಿರಂಗಪಡಿಸಿದ್ದಾರೆ. ಮುಂದಿನ ವರ್ಷ ಪ್ರವಾಸದಲ್ಲಿ ಎರಡು ಹೆಚ್ಚುವರಿ ಟಿ20 ಪಂದ್ಯಗಳನ್ನು ಆಡಲು ಭಾರತೀಯ ಮಂಡಳಿ ಇಂಗ್ಲೆಂಡಿಗೆ ಆಫರ್ ನೀಡಿದೆ. ಅದರಂತೆ ಮುಂದಿನ ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ ತಂಡ ಒಟ್ಟು 5 ಟಿ20 ಪಂದ್ಯಗಳನ್ನಾಡಲಿದೆ ಎಂದು ತಿಳಿಸಿದ್ದಾರೆ.
‘ನಾವು ಮುಂದಿನ ಜುಲೈನಲ್ಲಿ ಇಂಗ್ಲೆಂಡ್ ಸರಣಿಗಾಗಿ ತೆರಳಿದಾಗ, ಎರಡು ಹೆಚ್ಚುವರಿ ಟಿ20 ಪಂದ್ಯಗಳನ್ನು ಆಡುವುದಾಗಿ ಇಸಿಬಿಗೆ ಆಫರ್ ನೀಡಿದ್ದೇವೆ. ನಮ್ಮ ತಂಡವು ಮೂರು ಟಿ20 ಪಂದ್ಯಗಳ ಬದಲಿಗೆ ಐದು ಟಿ20 ಪಂದ್ಯಗಳನ್ನು ಆಡಲಿದೆ. ಹಾಗೆಯೇ 5ನೇ ಟೆಸ್ಟ್ ಪಂದ್ಯವನ್ನು ಆಡುವ ಪ್ರಸ್ತಾಪವೂ ಇದೆ. ಈ ಪ್ರಸ್ತಾಪಗಳಲ್ಲಿ ಒಂದನ್ನು ಆಯ್ಕೆ ಮಾಡುವುದು ಸಂಪೂರ್ಣವಾಗಿ ಅವರಿಗೆ (ಇಸಿಬಿ) ಬಿಟ್ಟದ್ದು. ಅಂದರೆ 1 ಟೆಸ್ಟ್ ಬದಲಿಗೆ 2 ಟಿ20 ಪಂದ್ಯ ಆಡಬಹುದು, ಇಲ್ಲ ಐದನೇ ಟೆಸ್ಟ್ ಪಂದ್ಯವನ್ನೇ ಮರು ಆಯೋಜಿಸಬಹುದು ಎಂದು ಜಯ್ ಶಾ ತಿಳಿಸಿದ್ದಾರೆ.
ಭಾರತ-ಇಂಗ್ಲೆಂಡ್ ನಡುವಣ ನಾಲ್ಕನೇ ಟೆಸ್ಟ್ ಪಂದ್ಯದ ವೇಳೆ ಟೀಮ್ ಇಂಡಿಯಾ ಕೋಚ್ ರವಿ ಶಾಸ್ತ್ರಿ ಕೊರೋನಾ ಸೋಂಕಿಗೆ ತುತ್ತಾಗಿದ್ದರು. ಇದರ ಬೆನ್ನಲ್ಲೇ ಬೌಲಿಂಗ್ ತರಬೇತುದಾರ ಭರತ್ ಅರುಣ್ ಮತ್ತು ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ಸೇರಿದಂತೆ ಸಹಾಯಕ ಸಿಬ್ಬಂದಿಯಲ್ಲೂ ಕೊರೋನಾ ಸೋಂಕು ಕಾಣಿಸಿಕೊಂಡಿತು. ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದ ಟೀಮ್ ಇಂಡಿಯಾ ಆಟಗಾರರು ಐದನೇ ಟೆಸ್ಟ್ ಪಂದ್ಯದಿಂದ ಹಿಂದೆ ಸರಿಯುವ ನಿರ್ಧಾರ ಮಾಡಿದ್ದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss