ಹೊಸದಿಗಂತ ವರದಿ, ಧಾರವಾಡ:
ನಕಲಿ ಕೀ ಬಳಸಿ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಖದೀಮನ್ನು ಬಂಧಿಸುವಲ್ಲಿ ಸ್ಥಳೀಯ ವಿದ್ಯಾಗಿರಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೂಲತಃ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೊಟೇಬೆನ್ನೂರು ಹಾಗೂ ಗೌಳಿಗಲ್ಲಿ ನಿವಾಸಿ ಕೃಷ್ಣಾ ಅಲಿಯಾಸ್ ಕಿಟ್ಯಾ ಮಿರಜಕರ(26) ಬಂಧಿತ ಬೈಕ್ ಕಳ್ಳ ಎಂದು ತಿಳಿದಿದೆ. ಬಂಧಿತನಿoದ ಬೇರೆ-ಬೇರೆ ಕಂಪೆನಿಗಳ ಏಳು ದ್ವಿಚಕ್ರ ವಾಹನ, ಒಂದು ಹೊಂಡಾ ಸ್ಕೂಟರ್ ಸೇರಿದಂತೆ ಒಟ್ಟು 2.50 ಲಕ್ಷ ರೂ.ಮೌಲ್ಯದ ವಾಹನ ವಶಕ್ಕೆ ಪಡೆಯಲಾಗಿದೆ. ಪ್ರಕರಣ ಬೇಧಿಸಿದ ವಿದ್ಯಾಗಿರಿ ಠಾಣೆಯ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಪೊಲೀಸ್ ಆಯುಕ್ತ ಲಾಬೂರಾಮ್ ಅಭಿನಂದಿಸಿದ್ದಾರೆ.