ಮುಂದುವರೆದ ಎಲೆಕ್ಟ್ರಿಕ್‌ ಸ್ಕೂಟರ್‌ಗಳ ಸ್ಪೋಟ ಪ್ರಕರಣ: 20 ಸ್ಕೂಟರ್‌ಗಳು ಧಗಧಗ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಹಾರಾಷ್ಟ್ರದ ನಾಸಿಕ್‌ನಲ್ಲಿ 20 ಎಲೆಕ್ಟ್ರಿಕ್ ಸ್ಕೂಟರ್‌ಗಳು ಹೊತ್ತಿ ಉರಿದ ಘಟನೆ ನಡೆದಿದೆ. ಜಿತೇಂದ್ರ ಇವಿಯಿಂದ ಬೆಂಗಳೂರಿಗೆ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಸಾಗಿಸುತ್ತಿದ್ದಾಗ ಈ ಅಪಘಡ ಸಂಭವಿಸಿದೆ. ಘಟನೆಯ ಕುರಿತು ಪರಿಶೀಲನೆ ನಡೆಸಲು ಕಂಪನಿ ತನಿಖೆಯನ್ನು ಪ್ರಾರಂಭಿಸಿದೆ. ಸದ್ಯ ಅಗ್ನಿ ಅವಘಡದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಂಟೈನರ್‌ನಲ್ಲಿ ಒಟ್ಟು 40 ಸ್ಕೂಟರ್‌ಗಳಿದ್ದವು ಎಂದು ಹೇಳಲಾಗಿದ್ದು, ಎಲ್ಲವೂ ಸುಟ್ಟು ಕರಕಲಾಗಿವೆ. ಈ ಘಟನೆಗೆ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಬಳಸುವ ಬ್ಯಾಟರಿಗಳ ಗುಣಮಟ್ಟ ಮತ್ತು ಸಂಬಂಧಿತ ಅಂಶಗಳೇ ಕಾರಣ ಎನ್ನಲಾಗಿದೆ. ಈ ಬಗ್ಗೆ ಜಿತೇಂದ್ರ ಇವಿ ವಕ್ತಾರರು ಪ್ರತಿಕ್ರಿಯೆ ನೀಡಿದ್ದು, ದುರದೃಷ್ಟವಶಾತ್ ಅಹಿತಕರ ಘಟನೆ ನಡೆದಿದೆ. ಈ ದುರಂತಕ್ಕೆ ಕಾರಣಗಳ ಬಗ್ಗೆ ನಾವು ನಿಗಾ ಇಡುತ್ತೇವೆ ಎಂದಿದ್ದಾರೆ.

ಮೂರು ವಾರಗಳ ಅವಧಿಯಲ್ಲಿ ಎಲೆಕ್ಟ್ರಿಕ್ ಬೈಕ್‌ಗಳಿಗೆ ಬೆಂಕಿ ಹೊತ್ತಿಕೊಂಡ ಐದನೇ ಘಟನೆ ಇದಾಗಿದೆ. ಮಾರ್ಚ್ 26 ರಂದು ಪುಣೆಯಲ್ಲಿ ಓಲಾ ಎಸ್1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್ ಬೆಂಕಿಗೆ ಆಹುತಿಯಾಗಿತ್ತು. ಅದೇ ದಿನ ತಮಿಳುನಾಡಿನ ವೆಲ್ಲೂರಿನಲ್ಲಿ ಓಕಿನಾವಾ ಎಲೆಕ್ಟ್ರಿಕ್ ಸ್ಕೂಟರ್‌ಗೆ ಬೆಂಕಿ ಹತ್ತಿಕೊಂಡಿತು. ಮಾರ್ಚ್ 28 ರಂದು ತಿರುಚ್ಚಿಯಲ್ಲಿ ಇಂತಹದ್ದೇ ಘಟನೆ ನಡೆದಿದ್ದು, ಮರುದಿನ ಚೆನ್ನೈನಲ್ಲಿ ನಾಲ್ಕನೇ ಘಟನೆ ನಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!