ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಸ್, ಸುದ್ದಿಯ ಶೀರ್ಷಿಕೆ ಸರಿಯಾಗಿಯೇ ಇದೆ.
ರೈಲು ಪ್ರಯಾಣಿಕರೊಬ್ಬರು ಚಹಾವೊಂದಕ್ಕೆ 70 ರೂಪಾಯಿ ಪಾವತಿಸಿರುವ ಫೋಟೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.ದೆಹಲಿಯಿಂದ ಭೋಪಾಲ್ಗೆ ಶತಾಬ್ದಿ ಎಕ್ಸ್ ಪ್ರೆಸ್ ರೈಲಿನಲ್ಲಿ ಜೂ.28ರಂದು ಪ್ರಯಾಣಿಸುವ ವೇಳೆ ಕುಡಿದ 70 ರೂ. ಚಹಾ ಒಂದಕ್ಕೆ ಬರೋಬ್ಬರಿ 70 ರೂ. ತೆರಿಗೆ ಹಾಕಲಾಗಿದೆ. ಪ್ರಯಾಣಿಕ ಈ ತೆರಿಗೆ ಇನ್ವೈಸ್ಗಳ ಫೋಟೊ ಹಂಚಿಕೊಂಡಿದ್ದಾರೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ರೈಲ್ವೆ ಮೂಲಗಳು, ಪ್ರಯಾಣಿಕರು ತಮ್ಮ ಟಿಕೆಟ್ ಕಾಯ್ದಿರಿಸುವ ವೇಳೆ ಆಹಾರವನ್ನು ಕೂಡಾ ಬುಕ್ಕಿಂಗ್ ಮಾಡದೇ, ಪ್ರಯಾಣದ ವೇಳೆ ಯಾವುದೇ ಆಹಾರಕ್ಕಾಗಿ ಮನವಿ ಮಾಡಿದರೆ 50 ರೂಪಾಯಿ ಸೇವಾ ಶುಲ್ಕ ವಿಸಲಾಗುತ್ತದೆ. ಈ ಸಂಬಂಧ 2018ರಲ್ಲೇ ಸುತ್ತೋಲೆ ಹೊರಡಿಸಲಾಗಿದೆ ಹೇಳಿವೆ.