ಕೊಲಂಬಿಯಾದಲ್ಲಿ ಭೀಕರ ಅಪಘಾತ: 20 ಜನರು ದುರ್ಮರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ನೈಋತ್ಯ ಕೊಲಂಬಿಯಾದ ಪ್ಯಾನ್-ಅಮೆರಿಕನ್ ಹೆದ್ದಾರಿಯಲ್ಲಿ  ಬಸ್ ಪಲ್ಟಿಯಾದ ಪರಿಣಾಮ ಕನಿಷ್ಠ 20 ಜನರು ಸಾವನ್ನಪ್ಪಿ 15 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನೈಋತ್ಯ ಕೊಲಂಬಿಯಾದ ಪಾಸ್ಟೊ ಮತ್ತು ಪೊಪಯಾನ್ ನಗರಗಳ ಸಮೀಪ ಅಪಘಾತ ಸಂಭವಿಸಿದೆ.
“ದುರದೃಷ್ಟವಶಾತ್, ಭೀಕರ ಅಪಘಾತದಲ್ಲಿ 20 ಜನರು ಸತ್ತಿದ್ದಾರೆ” ಎಂದು ನರಿನೋ ವಿಭಾಗದ ಟ್ರಾಫಿಕ್ ಪೋಲೀಸ್‌ ಕ್ಯಾಪ್ಟನ್ ಆಲ್ಬರ್ಟ್‌ಲ್ಯಾಂಡ್ ಅಗುಡೆಲೊ ಹೇಳಿದರು. ಗಾಯಗೊಂಡವರಲ್ಲಿ ಮೂರು ವರ್ಷದ ಬಾಲಕಿ ಮತ್ತು ಎಂಟು ವರ್ಷದ ಬಾಲಕ ಸೇರಿದ್ದಾರೆ. ಬಸ್‌ ನ ಬ್ರೇಕ್ ವ್ಯವಸ್ಥೆಯಲ್ಲಿ ಕಂಡುಬಂದ ಯಾಂತ್ರಿಕ ವೈಫಲ್ಯಗಳಿಂದ ಅಪಘಾತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ರಸ್ತೆ ಮಂಜಿನಿಂದ ಕೂಡಿದ್ದು ಚಾಲಕ ಮಂಜಿನ ಪ್ರದೇಶದಿಂದ ಹೊರಬಂದ ನಂತರ ನಿಯಂತ್ರಣ ತಪ್ಪಿದೆ ಎಂದು ಪ್ರಾಥಮಿಕ ವರದಿ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!