Thursday, March 30, 2023

Latest Posts

ಡಿಫಾಲ್ಟರ್‌ ಗಳ ಮಾಹಿತಿ ಹಂಚಿಕೊಂಡವರಿಗೆ 20ಲಕ್ಷ ರೂ. ಬಹುಮಾನ ಘೋಷಿಸಿದ ಸೆಬಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಡೀಫಾಲ್ಟರ್‌ ಗಳ ಕುರಿತಾಗಿ ಮಾಹಿತಿ ನೀಡಿದವರಿಗೆ ಷೇರುಮಾರುಕಟ್ಟೆ ನಿಯಂತ್ರಕ ಸೆಬಿ 20 ಲಕ್ಷ ರೂಪಾಯಿವರೆಗಿನ ಬಹುಮಾನ ಘೋಷಿಸಿದೆ. ಅಪರಾಧಿಗಳಿಂದ ದಂಡವನ್ನು ವಸೂಲಿ ಮಾಡುವ ಉದ್ದೇಶದಿಂದ ಸೆಬಿ ಈ ವ್ಯವಸ್ಥೆಯನ್ನು ಪರಿಚಯಿಸಿದೆ. ಎರಡು ಹಂತಗಳಲ್ಲಿ ಸೆಬಿ ಬಹುಮಾನ ನೀಡುವುದಾಗಿ ಹೇಳಿದ್ದು ವಸೂಲಾತಿ ಪ್ರಕ್ರಿಯೆಗಳ ಅಡಿಯಲ್ಲಿ ಸುಸ್ತಿದಾರರ ಆಸ್ತಿಗಳ ಬಗ್ಗೆ ವಿಶ್ವಾಸಾರ್ಹ ಮಾಹಿತಿಯನ್ನು ಒದಗಿಸುವ ಮಾಹಿತಿದಾರರು ನೀಡುವ ಮಾಹಿತಿಯ ಆಧಾರದ ಮೇಲೆ ಬಹುಮಾನ ಮೊತ್ತ ನಿರ್ಧರಿತವಾಗುತ್ತದೆ ಎಂದು ಹೇಳಿದೆ.

ಒಬ್ಬ ವ್ಯಕ್ತಿಯ ‘ಚೇತರಿಸಿಕೊಳ್ಳಲು ಕಷ್ಟ’ ಎಂದು ಪ್ರಮಾಣೀಕರಿಸಲಾದ ಬಾಕಿಗಳಿಗೆ ಸಂಬಂಧಿಸಿದಂತೆ ಹಾಗು ಸುಸ್ತಿದಾರನ ಆಸ್ತಿಗೆ ಸಂಬಂಧಿಸಿದಂತೆ ಮೂಲ ಮಾಹಿತಿಯನ್ನು ಒದಗಿಸಿದರೆ ಬಹುಮಾನ ನೀಡಲಾಗುವುದು ಎಂದು ಸೆಬಿ ಹೇಳಿದೆ.

ಈ ಕುರಿತು ಸೆಬಿ 515 ಸುಸ್ತಿದಾರರ ಮಾಹಿತಿಯನ್ನು ಒದಗಿಸಿದ್ದು ಯಾರು ಬೇಕಾದರೂ ಈ ಕುರಿತು ಮಾಹಿತಿ ನೀಡಬಹುದಾಗಿದೆ. ಬಹುಮಾನ ಶಿಫಾರಸ್ಸಿಗೆ ಸೆಬಿ ಸಮಿತಿಯೊಂದನ್ನು ರಚಿಸಿದ್ದು ಮಾಹಿತಿದಾರರ ಪುರಸ್ಕಾರ ಸಮಿತಿಯು ಮಾಹಿತಿದಾರರ ಅರ್ಹತೆಗೆ ಸಂಬಂಧಿಸಿದ ವಿಷಯಗಳ ಕುರಿತು ಸಕ್ಷಮ ಪ್ರಾಧಿಕಾರಕ್ಕೆ ತನ್ನ ಶಿಫಾರಸುಗಳನ್ನು ನೀಡುತ್ತದೆ ಮತ್ತು ಮಾಹಿತಿದಾರರಿಗೆ ಪಾವತಿಸಬೇಕಾದ ಬಹುಮಾನದ ಮೊತ್ತವನ್ನು ನಿರ್ಧರಿಸಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!