Friday, August 12, 2022

Latest Posts

200ರ ಗಡಿ ದಾಟಲಿದೆಯೇ ಉಡುಪಿಯಲ್ಲಿ ಇಂದು ಕೊರೋನಾ ವೈರಸ್ ಸೋಂಕು?

ಉಡುಪಿ: ಕಳೆದ 17 ದಿನಗಳಿಂದ ಒಂದೇ ಸಮನೆ ಏರುತ್ತಿರುವ ನೋವೆಲ್ ಕೊರೋನಾ ವೈರಸ್ ಸೋಂಕು ಇಂದು ಸ್ಪೋಟಿಸುವ ಮುನ್ಸೂಚನೆ ಸಿಕ್ಕಿದೆ. ಇಂದು ಉಡುಪಿ ಜಿಲ್ಲೆಯಲ್ಲಿ ಒಂದೇ ದಿನ 50ಕ್ಕೂ ಅಧಿಕ ಕೋವಿಡ್ -19 ಖಚಿತ ಪ್ರಕರಣಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆಯೇ? ಇಂದು ಉಡುಪಿಯಲ್ಲಿ ಇಲ್ಲಿಯವರೆಗಿನ ರೆಕಾರ್ಡ್ ಬ್ರೇಕ್ ಆಗಲಿದೆಯೇ? ಎನ್ನುವ ಕುತೂಹಲ ಉಂಟಾಗಿದೆ. ಹೊಸದಾಗಿ ಉಡುಪಿ ಜಿಲ್ಲೆಯಲ್ಲಿ 50ಕ್ಕೂ ಅಧಿಕ ನಿಯಂತ್ರಿತ ವಲಯಗಳು ನಿರ್ಮಾಣವಾಗುವ ಸಾಧ್ಯತೆ ಇದೆ. ಹೊರ ರಾಜ್ಯಗಳಿಂದ ಜಿಲ್ಲೆಗೆ ಬಂದವರಿಂದ ಉಡುಪಿಯ ಸ್ಥಿತಿ ಹದಗೆಟ್ಟಿದೆ.
ಉಡುಪಿ ಜಿಲ್ಲೆಯಲ್ಲಿ ಈಗಾಗಲೇ 177 ಕೊರೋನಾ ವೈರಸ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇಂದು ಈ ಸಂಖ್ಯೆ 200ರ ಗಡಿ ದಾಟಲಿದೆ. ಪ್ರಸ್ತುತ ಉಡುಪಿ ಜಿಲ್ಲಾಡಳಿತ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಬುಲೆಟಿನ್ ಗಾಗಿ ಕಾದು ಕುಳಿತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss