Tuesday, August 16, 2022

Latest Posts

200 ದಿನಗಳ ಬಳಿಕ ಭಕ್ತರಿಗೆ ಮಂತ್ರಾಲಯ ಗುರು ರಾಯರ ದರುಶನ

ರಾಯಚೂರು: ಗುರು ರಾಘವೇಂದ್ರಸ್ವಾಮಿಗಳ ದಿವ್ಯ ಸಾನ್ನಿದ್ಯವಿರುವ ಮಂತ್ರಾಲಯ ರಾಘವೇಂದ್ರ ಮಠದ ಆವರಣವನ್ನು 200 ದಿನಗಳ ನಂತರ ಇಂದು ಭಕ್ತರಿಗೆ ಮುಕ್ತಗೊಳಿಸಲಾಗಿದೆ.
ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಕಳೆದ ೬ ತಿಂಗಳಿಂದ ರಾಯರ ದರ್ಶನವನ್ನು ನಿಷೇಧಿಸಿದ್ದ ಮಠ , ಇಂದು ಪುನಃ ಭಕ್ತರಿಗೆ ರಾಯರ ದರ್ಶನ ಮಾಡಲು ಅವಕಾಶ ಕಲ್ಪಿಸಿದೆ. ಇಂದು ಬೆಳಗ್ಗೆ 8 ರಿಂದ ಸಂಜೆ 4 ರವರೆಗೆ ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗಿದೆ.
ಮಠಕ್ಕೆ ಆಗಮಿಸುವ ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಮಾಡಬೇಕಿದೆ. ಜತೆಗೆ ಕೊರೋನಾ ಕಾಲದ ನಿಯಮಾವಳಿಗಳನ್ನು ಪಾಲಿಸಬೇಕು ಎಂದು ಮಠದ ಪ್ರಕಟಣೆ ಹೇಳಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss