Monday, August 15, 2022

Latest Posts

ಮುಂಬೈ ದಾಳಿ| ಸಂಚುಕೋರ ಹಫೀಜ್ ಸಯೀದ್ ನ 3 ಆಪ್ತ ಸಹಾಯಕರಿಗೆ ಜೈಲು ಶಿಕ್ಷೆ ವಿಧಿಸಿದ ಪಾಕ್ ನ್ಯಾಯಾಲಯ

ಇಸ್ಲಮಾಬಾದ್: 2008ರ ಮುಂಬೈ ದಾಳಿಯ ಸಂಚುಕೋರನಾಗಿದ್ದ ಹಫೀಜ್ ಸಯೀದ್ ನ ಆಪ್ತರಾಗಿದ್ದ, ಉಗ್ರ ಸಂಘಟನೆಯಾದ ಜಮಾತ್-ಉದ್-ದವಾ (ಜುಡಿ) ಯ ಮೂವರು ನಾಯಕರಿಗೆ ಪಾಕಿಸ್ತಾನದ ನ್ಯಾಯಾಲಯ 16 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಭಯೋತ್ಪಾದಕರಿಗೆ ಹಣಕಾಸು ನೆರವು ನೀಡಿರುವ ಪ್ರಕರಣದ ಅಡಿಯಲ್ಲಿ ಮಲಿಕ್ ಜಾಫರ್ ಇಕ್ಬಾಲ್ ಮತ್ತು ಅಬ್ದುಲ್ ಸಲಾಂಗೆ ತಲಾ 16.5 ವರ್ಷಗಳ ಜೈಲು ಶಿಕ್ಷೆ ನೀಡಲಾಗಿದೆ.

2008 ರ ಮುಂಬೈ ದಾಳಿಯಲ್ಲಿ ಅಮೆರಿಕನ್ನರು ಮತ್ತು ಇತರ ವಿದೇಶಿಯರು ಸೇರಿದಂತೆ 160 ಜನರು ಸಾವನ್ನಪ್ಪಿದರು. ಭಯೋತ್ಪಾದನೆಗೆ ಧನಸಹಾಯ ನೀಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಹಾಗೂ ಭಯೋತ್ಪಾದಕ ಹಣಕಾಸು ಪತ್ತೆಹಚ್ಚಲು ಮತ್ತು ನಿಲ್ಲಿಸಲು ಕಾನೂನುಗಳನ್ನು ಜಾರಿಗೆ ತರಲು ವಾಚ್‌ಡಾಗ್ ಪಾಕಿಸ್ತಾನಕ್ಕೆ ಕರೆ ನೀಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss