ಬೆಂಗಳೂರು:ಇಂದು ವಿಧಾನಸಭೆಯಲ್ಲಿ ಸಿಎಂ ಬಿ.ಎಸ್ ಯಡಿಯೂರಪ್ಪ 2018ನೇ ಸಾಲಿನ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಮತ್ತು ಅತ್ಯುತ್ತಮ ನಟ ಪ್ರಶಸ್ತಿಯನ್ನು ಘೋಷಿಸಿದರು.
ಮೊದಲ ಅತ್ಯುತ್ತಮ ಚಲನಚಿತ್ರವಾಗಿ ಆ ಕರಾಳ ರಾತ್ರಿ, ಎರಡನೇ ಚಿತ್ರ ರಾಮನ ಸವಾರಿ, ಮೂರನೆ ಚಿತ್ರ ಒಂದಲ್ಲಾ ಎರಡಲ್ಲಾ.
ಸಂತಕವಿ ಕನಕದಾಸರ ರಾಮಧಾನ್ಯ- ಸಾಮಾಜಿಕ ಕಳಕಳಿ ಆಧಾರಿತ ಚಿತ್ರ
ಮನರಂಜನಾ ಚಿತ್ರ- ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆ ಕಾಸರಗೋಡು
ಮಕ್ಕಳ ಚಿತ್ರ- ಹೂವು ಬಳ್ಳಿ
ಪ್ರಾದೇಶಿಕ ಚಿತ್ರ- ದೇಯಿ ಬೈದೇನಿ
ಹಿರಿಯ ಕಲಾವಿದರ ಪ್ರಶಸ್ತಿಗೆ
ಹಿರಿಯ ನಟ ಶ್ರೀನಿವಾಸ ಮೂರ್ತಿ – ಡಾ ರಾಜ್ ಕುಮಾರ್ ಪ್ರಶಸ್ತಿ
ಪಿ. ಶೇಷಾದ್ರಿ-ಪುಟ್ಟಣ್ಣ ಕಣಗಾಲ್ ಪ್ರಶಸ್ತಿ
ಬಿ ಎಸ್ ಬಸವರಾಜು – ವಿಷ್ಣುವರ್ಧನ ಪ್ರಶಸ್ತಿ
ಅತ್ಯುತ್ತಮ ನಟ- ರಾಗವೇಂದ್ರ ರಾಜ್ ಕುಮಾರ್
ಅತ್ಯುತ್ತಮ ನಟಿ-ಮೇಘನ ರಾಜ್
2018 ಸಾಲಿಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಶ್ರಮಿಸಿರುವ ಕಲಾವಿದರು ಪ್ರಶಸ್ತಿಯನ್ನು ಪಡೆದಿದ್ದಾರೆ.