spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, December 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

2019ನೇ ಸಾಲಿನಲ್ಲಿ ಭಾರತ 5ನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ದೇಶವಾಗಿದೆ.

- Advertisement -Nitte

ಭಾರತ 70 ವರ್ಷಗಳಿಂದ ಬೆಳವಣಿಗೆಯಲ್ಲಿ ಸಾಕಷ್ಟು ಕಷ್ಟಗಳನ್ನು ಅನುಭವಿಸಿದೆ ಆದರೆ 2014ರ ಮೋದಿ ಸರ್ಕಾರದ ನಂತರ ದೇಶದ ಆರ್ಥಿಕತೆಯಲ್ಲಿ ಬೆಳವಣಿಕೆ ಕಾಣಬಹುದಾಗಿದೆ. ಮೋದಿ ಪ್ರಧಾನ ಮಂತ್ರಿಯಾಗಿ ಕೆಲಸ ಪ್ರಾರಂಭಿಸಿದಾಗ ಅವರು ದೇಶದ ಆರ್ಥಿಕತೆಯನ್ನು ವೃದ್ಧಿಸುವುದಾಗಿ ಹೇಳಿದ್ದರು.

ಈಗ ಭಾರತ ವಿಶ್ವದಲ್ಲಿ ತನ್ನ ಸಂಪತ್ತನ್ನು 3 ಟ್ರಿಲಿಯನ್ ಡಾಲರ್ ಗೆ ಏರಿಕೆಯಾಗಿದೆ. ಭಾರತ ಆರ್ಥಿಕತೆಯಲ್ಲಿ 7ನೇ ಸ್ಥಾನದಲ್ಲಿದ್ದು, 2019ನೇ ಸಾಲಿನಲ್ಲಿ ಯೂಕೆಯನ್ನು ಮೀರಿಸಲು ದುಡಿಯುತ್ತಿದೆ. 2014ರಿಂದ ಭಾರತದ ಜಿಡಿಪಿ 50% ಏರಿಕೆಯಾಗಿದ್ದು, 2014ರಲ್ಲಿ ಜಿಡಿಪಿ 2 ಟ್ರಿಲಿಯನ್ ಡಾಲರ್ ಇದ್ದರೇ ಈಗ ಮೂರು ಟ್ರಿಲಿಯನ್ ಡಾಲರ್ ಗೆ ವೃದ್ಧಿಯಾಗಿದೆ. ಅಂದರೆ 1 ಟ್ರಿಲಿಯನ್ ಡಾಲರ್ ನಷ್ಟು ಜಿಡಿಪಿ ಏರಿಕೆ ಕಂಡಿದೆ.

ಭಾರತ, 2025ರಲ್ಲಿ 2ನೇ ಸ್ಥಾನ ಗಳಿಸುವುದರ ಮೂಲಕ ಜಪಾನ್ ನನ್ನು ಹಿಂದಿಕ್ಕುತ್ತದೆ ಎಂದು ವರದಿಯಾಗಿದೆ. ಮೋದಿ ಸರ್ಕಾರದಲ್ಲಿ ಆರ್ಥಕತೆಯ ಸುಧಾರಣೆಯೇ ದೊಡ್ಡ ಸವಾಲಾಗಿದೆ, ಭಾರತ ಸರ್ಕಾರ ದೇಶದಲ್ಲಿನ ಬ್ಯಾಂಕಿನ ವಹಿವಾಟು ಮತ್ತು ಅದರಲ್ಲಿನ ಸಾಲದ ಹೊರೆಯನ್ನು(non-performing loans) ಕಡಿಮೆ ಮಾಡಲು ಸರ್ಕಾರ ಹೊಸ ನಿಯಮಗಳನ್ನು ಮಾಡುತ್ತಿದೆ.

2014ರಲ್ಲಿ ಮೇಕ್ ಇನ್ ಇಂಡಿಯಾ ಯೋಜನೆಯಲ್ಲಿ ಉತ್ಪಾದನ ವಲಯದಿಂದ ಜಿಡಿಪಿಗೆ ಶೇ.25% ಮುಟ್ಟುವ ಗುರಿ ಹೊಂದಿತ್ತು. ಆದರೆ ಕೇವಲ ಶೇ.18% ನೀಡುತ್ತಿದೆ. ಮುಂದಿನ 20 ವರ್ಷಗಳಲ್ಲಿ ಬರೋಬ್ಬರಿ 7.5 ದಶಲಕ್ಷ ಜನರು ಉದ್ಯೋಗಕ್ಕೆ ಸೇರಲಿದ್ದು, ಮೋದಿ ಸರ್ಕಾರಕ್ಕೆ ಉತ್ಪಾದನ ವಲಯ ಮತ್ತು ಸೇವಾ ವಲಯದಲ್ಲಿನ ನಿರುದ್ಯೋಗ ಸಮಸ್ಯೆಗಳನ್ನು ನಿವಾರಿಸುವುದೇ ದೊಡ್ಡ ಸವಾಲಾಗಿದೆಎಂದು ಮೂಲಗಳು ತಿಳಿಸಿವೆ.

 

 

 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss