2020ಕ್ಕೆ ಗಗನಯಾನಕ್ಕೆ ಇಸ್ರೋ ಸಂಕಲ್ಪ

0
232

ಬೆಂಗಳೂರು: ಇಸ್ರೋ 2020ರಲ್ಲಿ ಗಗನಯಾನ ಹೊರಡಿಸಲಿದೆ.

ಇಸ್ರೋ ಪ್ರತೀ ವರ್ಷವೂ ಒಂದೊಂದು ಅದ್ಭುತವಾದ ಸಾಧನೆಯೆಡೆಗೆ ಹೆಜ್ಜೆಯಿಡುತ್ತಿದೆ. 2019ರಲ್ಲಿ ಯಾವ ದೇಶವೂ ಮಾಡದ ಸಹಾಸಕ್ಕೆ ಕೈಹಾಕಿದ ಇಸ್ರೋ ಚಂದ್ರನ ದಕ್ಷಿಣ ದಿಕ್ಕನ್ನು ಸ್ಪರ್ಶಿಸಿದೆ. ಇದೀಗ 2020ರಲ್ಲಿ  ಗಗನಯಾನಕ್ಕೆ ಇಸ್ರೋದ ಕಾರ್ಯಗಾರ ಪ್ರಾರಂಭವಾಗಿದೆ.

ಟೈಮ್ಸ್ ಆಫ್ ಇಂಡಿಯಾ ವರದಿಯಲ್ಲಿ ಇಸ್ರೋ ಅಧ್ಯಕ್ಷ ಕೆ. ಸಿವನ್, “ಇಸ್ರೋ 2020 ರಲ್ಲಿ 10 ಉಪಗ್ರಹಗಳನ್ನು ಹೊಂದಿರುವ ಮಿಶನ್ ಉಡಾವಣೆ ಮಾಡಲಿದ್ದು. ಜಿಸಾಟ್1(Gisat1) ಮತ್ತು ಜಿಸಾಟ್-12 ಆರ್(Gisat-12R) ಎಂಬ ಎರಡು ಸಂವಹನ ಉಪಗ್ರಹವನ್ನು ಹೊಂದಿದ್ದು ಅವುಗಳು ಭಾಹ್ಯಾಕಾಶದಿಂದ ಭೂವಿಯ ಉಪಖಂಡಗಳನ್ನು ಅವಲೋಕನೆ ಮಾಡುವ ಶಕ್ತಿ ಹೊಂದಿರುತ್ತದೆ. ರಿಸಾಟ್-2ಬಿಆರ್2(Risat-2BR2) ಅವಲೋಕನ ಉಪಗ್ರಹಗಳು ಭಾರತದ ಸೈನ್ಯದ ಅಗತ್ಯಕ್ಕಾಗಿ ವಿಶೇಷವಾಗಿ ರೂಪುಗೊಂಡ Risat ಗುಂಪಿನ ಉಪಗ್ರಹಗಳಲ್ಲಿ ಒಂದಾಗಿದೆ. 2020ರ ಮಧ್ಯದಲ್ಲಿ ಆಧಿತ್ಯ ಎಲ್1(AdithyaL1) ಮತ್ತು ವರ್ಷಾಂತ್ಯದಲ್ಲಿ ಗಗನಯಾನವನ್ನು ಉಡಾವಣೆ ಮಾಡಲಾಗುವುದು” ಎಂದು ಹೇಳಿದ್ದಾರೆ.

ಆಧಿತ್ಯ ಎಲ್1 ಉಪಗ್ರಹವೂ ಸೂರ್ಯನಿಂದ ಸಾವಿರಾರು ಕಿಲೋಮೀಟರ್ ದೋರಕ್ಕೆ ವಿಸ್ತಾರವಾಗಿರುವ ಕೊರೋನ ಮತ್ತು ಅದರ ತಾಪಮಾನವನ್ನು ಅಧ್ಯಯನ ಮಾಡುತ್ತದೆ. ಆಧಿತ್ಯ ಎಲ್1 ಭೂಮಿಯಿಂದ 1.2 ಮಿಲಿಯನ್ ಕಿಲೋಮೀಟರ್ ದೂರದ ಆರ್ಬಿಟ್ ನಲ್ಲಿ ಇರಿಸಲಾಗುವುದು,ಹವಾಮಾನದಲ್ಲಿ ಆಗುತ್ತಿರುವ ವೆತ್ಯಯಗಳ ಪ್ರಭಾವ ಇನ್ನು ಪ್ರಶ್ನೆಯಾಗಿಯೇ ಉಳಿದಿದೆ ಆದ್ದರಿಂದ ಈ ಉಪಗ್ರಹವು  ಅಲ್ಲಿನ ಹವಾಮಾನವನ್ನು ಅರಿತುಕೊಳ್ಳುತ್ತದೆ ಎಂಬುದನ್ನೂ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here