Wednesday, June 29, 2022

Latest Posts

2020ರ ನೊಬೆಲ್ ವೈದ್ಯಕೀಯ ಪ್ರಶಸ್ತಿ ಪ್ರಕಟ: ಹೆಪಟಿಟಿಸ್ ಸಿ ವೈರಸ್ ಪತ್ತೆ ಹಚ್ಚಿದ್ದ ಮೂವರಿಗೆ ಗೌರವ

ಸ್ಟಾಕ್​ಹಾಮ್: 2020ರ ನೊಬೆಲ್ ವೈದ್ಯಕೀಯ ಪ್ರಶಸ್ತಿ ಈ ಬಾರಿ ಮೂವರಿಗೆ ನೀಡಲಾಗಿದೆ. ‘ಹೆಪಟಿಟಿಸ್ ಸಿ’ ವೈರಸ್ ಪತ್ತೆ ಹಚ್ಚಿದ್ದಕ್ಕಾಗಿ ಅಮೆರಿಕ ಮೂಲದವರಾದ ಹಾರ್ವೆ ಜೆ ಅಲ್ಟರ್, ಮೈಕಲ್ ಹಾಗ್ಟನ್, ಚಾರ್ಲ್ಸ್ ಎಂ.ರೈಸ್​ಗೆ ನೊಬೆಲ್ ನೀಡಿ ಗೌರವಿಸಲಾಗಿದೆ.
ಈ ಮೂವರು ಯಕೃತದ ಉರಿಯೂತಕ್ಕೆ(ಲಿವರ್ ಸಮಸ್ಯೆ) ಕಾರಣವಾಗುವ ಹೆಪಟೈಟಿಸ್ ಸಿ ವೈರಸ್​ ಮೂಲವನ್ನು ಕಂಡು ಹಿಡಿಯಲು ಯಶಸ್ವಿಯಾಗಿದ್ದಾರೆ. ಈ ವೈರಸ್​ ಅನ್ನು ಕೇವಲ ಎ ಮತ್ತು ಬಿ ವೈರಸ್​ಗಳಿಂದ ವಿವರಿಸಲು ಸಾಧ್ಯವಾಗಲ್ಲ. ಈ ವೈದ್ಯರ ಸಾಧನೆ ಇಂದು ಲಕ್ಷಾಂತರ ಜನರ ಜೀವ ಉಳಿಸಲು ಔಷಧ ಕಂಡು ಹಿಡಿಯಲು ಸಹಕಾರಿಯಾಗಿದೆ ಎಂದು ಸಮಿತಿ ಮೆಚ್ಚುಗೆ ಸೂಚಿಸಿದೆ.
ಮೊದಲಿಗೆ ಯಕೃತ್​​ ನಲ್ಲಿ ಕಾಣಿಸಿಕೊಳ್ಳುವ ಈ ರೋಗ ಬಳಿಕ ಲಿವರ್ ಕ್ಯಾನ್ಸರ್​ಗೆ ತಿರುಗಿ ಮನುಷ್ಯರ ಜೀವವನ್ನೇ ಬಲಿ ಪಡೆಯುತ್ತಂತೆ. ಈ ಸಂಶೋಧನೆಯಿಂದ ಇದೇ ಮೊದಲ ಬಾರಿಗೆ ವೈದ್ಯಕೀಯ ಲೋಕದಲ್ಲಿ ಈ ರೋಗವನ್ನ ಗುಣಪಡಿಸಬಹುದು ಜತೆಗೆ ಈ ವೈರಸ್​ ಅನ್ನು ಜಾಗತಿಕವಾಗಿ ನಿರ್ಮೂಲನೆ ಮಾಡಬಹುದೆಂಬ ಭರವಸೆ ಹುಟ್ಟಿದೆ.
1940 ರಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿತು ಈ ವೈರಸ್
1940 ರಲ್ಲಿ ಮೊದಲ ಬಾರಿಗೆ ಈ ವೈರಸ್ ಕಾಣಿಸಿಕೊಂಡಿತು. ಈ ರೋಗ ಎ ಮತ್ತು ಬಿ ಎರಡು ವಿಧಗಳಾಗಿ ಕಾಣಿಸಿಕೊಳ್ಳಲಿದ್ದು, ಎ ವೈರಸ್​​​​ ಕಲುಷಿತ ಆಹಾರ, ನೀರು ಸೇವನೆಯಿಂದ ಹರಡುತ್ತದೆ. ಬಿ ವೈರಸ್ ರಕ್ತದಿಂದ ಹರಡಲಿದ್ದು, ದೀರ್ಘಕಾಲಿಕ ರೋಗವಾಗಿರುತ್ತೆ. 1976 ರಲ್ಲಿ ಬ್ಲಂಬರ್ಗ್ ಎಂಬುವವರು ಈ ವೈರಸ್ ಕಂಡು ಹಿಡಿದು ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದರು.
ಈ ವೈರಸ್​​ಗೆ ಹೆಪಟಿಟಿಸ್​ ಸಿ ಹೆಸರು
ಮೈಕಲ್​ ಹಂಗ್ಟನ್​​ ಈ ವೈರಸ್​ ಕಂಡು ಹಿಡಿಯಲು ಚಿರೋನ್​​ನ ಫಾರ್ಮಾಸುಟಿಕಲ್ಸ್​​ ಫರ್ಮ್​ನಲ್ಲಿ ಅಧ್ಯಯನ ಮಾಡ್ತಾರೆ. ಹಾಂಗ್ಟನ್​ ಮತ್ತು ಅವರ ಸಹೋದ್ಯೋಗಿಗಳು ಸೋಂಕಿತ ಚಿಂಪಾಂಜಿಯ ರಕ್ತದಲ್ಲಿ ಕಂಡುಬರುವ ನ್ಯೂಕ್ಲಿಯಿಕ್ ಆಮ್ಲಗಳಿಂದ ಡಿಎನ್‌ಎ ತುಣುಕುಗಳ ಸಂಗ್ರಹಿಸಿ ಅಧ್ಯಯನ ಮುಂದುವರೆಸಿದರು. ಈ ತುಣುಕುಗಳಲ್ಲಿ ಹೆಚ್ಚಿನವು ಚಿಂಪಾಂಜಿಯ ಜೀನ್ಸ್​​​ನಿಂದಲೇ ಬಂದಿದ್ದರೂ ಕೆಲವು ಅಪರಿಚಿತ ವೈರಸ್‌ನಿಂದ ಹುಟ್ಟಿಕೊಳ್ಳುತ್ತವೆ ಎಂದು ಸಂಶೋಧಕರು ಕಂಡುಕೊಂಡರು. ಈ ಕ್ಲೋನ್ ಅನ್ನು ಫ್ಲವಿವೈರಸ್ ಕುಟುಂಬಕ್ಕೆ ಸೇರಿದ ಆರ್​​ಎನ್​ಯ ವೈರಸ್​​​ನಿಂದ ಹರಡುತ್ತದೆ ಎಂದು ಗುರುತಿಸಲಾಗಿದ್ದು, ಅದಕ್ಕೆ ಹೆಪಟಿಟಿಸ್​ ಸಿ ವೈರಸ್ ಎಂದು ಹೆಸರಿಸಲಾಯಿತು.
ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ 7 ಕೋಟಿಗೂ ಅಧಿಕ ಮಂದಿಯಲ್ಲಿ ಈ ರೋಗ ಕಾಣಿಸಿಕೊಂಡಿದೆ. ವರ್ಷಕ್ಕೆ ಸುಮಾರು 4 ಲಕ್ಷ ಜನರು ಸಾಯುತ್ತಾರೆ ಎನ್ನಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss