2020ರ ವರ್ಷಾಂತ್ಯದಲ್ಲಿ ಕೊರೋನಾಗೆ ಔಷಧಿ ಸಿದ್ಧ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

0
80

ವಾಷಿಂಗ್ಟನ್: 2020ರ ಅಂತ್ಯದೊಳಗೆ ಕೊರೋನಾ ಸೋಂಕಿಗೆ ಅಮೆರಿಕ ಔಷಧಿ ಕಂಡುಹಿಡಿಯುತ್ತದೆ ಎಂದು ಅಧ್ಯಕ್ಷೀಯ ಚುನಾವಣ ಪ್ರಚಾರದಲ್ಲಿ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

ಅಮೆರಿಕ ಕೊರೋನಾ ವಿರುದ್ಧ ಹೋರಾಟ ನಡೆಸಿ, ಅಮೆರಿಕ ಪ್ರಜೆಗಳನ್ನು ರಕ್ಷಿಸುವುದು ನಮ್ಮ ಜವಾಬ್ದಾರಿಯಾಗಿದೆ. ವಿಶ್ವದ ಬಲಿಷ್ಠ ರಾಷ್ಟ್ರವಾಗಿರುವ ಅಮೆರಿಕ ಕೊರೋನಾ ವೈರಸ್ ನನ್ನು ಸೋಲಿಸುತ್ತದೆ ಎಂಬ ಭರವಸೆ ಇದೆ ಎಂದರು. ನಾವು ಈ ಅಗೋಚರ ಶತ್ರು ವಿರುದ್ಧ ಗೆಲುವು ಸಾಧಿಸುತ್ತೇವೆ. ಹಾಗೂ ಅಮೆರಿಕ ಭವಿಷ್ಯ ಉಜ್ವಲಿಸಲಿದೆ ಎಂದು ನಂಬಿಕೆ ವ್ಯಕ್ತಪಡಿಸಿದರು.

ಅಮೆರಿಕದಲ್ಲಿ ಕೊರೋನಾ ಸೋಂಕಿಗೆ ಈಗಾಗಲೇ 68,276 ಮಂದಿ ಬಲಿಯಾಗಿದ್ದು, 1.18ಮಿಲಿಯನ್ ಮಂದಿ ಸೋಂಕಿತರಿದ್ದಾರೆ. ಇವರಲ್ಲಿ 1.53ಸಾವಿರ ಮಂದಿ ಗುಣಮುಖರಾಗಿದ್ದಾರೆ.

LEAVE A REPLY

Please enter your comment!
Please enter your name here