Wednesday, June 29, 2022

Latest Posts

2021ರ ವೇಳೆಗೆ ಭಾರತದಲ್ಲಿ ಕೊರೋನಾ ಲಸಿಕೆ ನಿರೀಕ್ಷೆ: ಲಸಿಕೆ ವಿತರಣೆ ಯೋಜನೆಯಲ್ಲಿದೆ: ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್

ಹೊಸದಿಲ್ಲಿ: 2021ರ ಆರಂಭದಲ್ಲಿ ಭಾರತದಲ್ಲಿ ಕೊರೋನಾ ವೈರಸ್ ಲಸಿಕೆ ಲಭಿಸುವ ಸಾಧ್ಯತೆಯಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಮಂಗಳವಾರ ನಡೆದ ಸಚಿವರ ಸಭೆಯಲ್ಲಿ ತಿಳಿಸಿದ್ದಾರೆ.

ಮುಂದಿನ ವರ್ಷದ ಆರಂಭದಲ್ಲಿ ನಾವು ಒಂದಕ್ಕಿಂತ ಹೆಚ್ಚು ಮೂಲಗಳಿಂದ ದೇಶದಲ್ಲಿ ಲಸಿಕೆ ಲಭಿಸುವ ನಿರೀಕ್ಷೆ ಹೊಂದಿದ್ದೇವೆ. ನಮ್ಮ ತಜ್ಞರ ತಂಡಗಳು ದೇಶದಲ್ಲಿ ಲಸಿಕೆ ವಿತರಣೆಯ ಕುರಿತು ಚಿಂತನೆ ನಡೆಸುತ್ತಿದೆಎಂದು ಆರೋಗ್ಯ ಸಚಿವರು ಹೇಳಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಅವರು ಮುಂದಿನ ವರ್ಷದ ಆರಂಭದಲ್ಲಿ ಲಸಿಕೆ ನೋಂದಣಿಗೆ ಸಿದ್ಧವಾಗಲಿದೆ ಎಂದು ಹೇಳಿದ್ದಾರೆ.

ಈಗ ಸುಮಾರು 40 ಲಸಿಕೆಗಳು ಕ್ಲಿನಿಕಲ್ ಪ್ರಯೋಗಗಳಲ್ಲಿದೆ.ಅವರಲ್ಲಿ 10 ಮಂದಿ ಮೂರು ಹಂತದ ಪ್ರಯೋಗಗಳಲ್ಲಿದೆ. ಇದು ಕೊನೆಯ ಹಂತದ ಕ್ಲಿನಿಕಲ್ ಪ್ರಯೋಗಗಳಾಗಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss