ಬೆಂಗಳೂರು: ಮುಂದಿನ ವರ್ಷ ಜೂನ್ನಲ್ಲಿ ೨೫ ಸಾವಿರ ಮನೆಗಳ ನಿರ್ಮಾಣ ಆಗಲಿದೆ. ಅರ್ಹ ಫಲಾನುಭವಿಗಳಿಗೆ ಮನೆ ಸಿಗಲಿದೆ, ಅಕಸ್ಮಾತ್ ಹೀಗಾಗಿದ್ದರೆ ನಾನು ಮಂತ್ರಿ ಸ್ಥಾನ ಅಲ್ಲ, ರಾಜಕಾರಣವನ್ನೇ ಬಿಟ್ಟುಬಿಡುತ್ತೇನೆ ಎಂದು ವಸತಿ ಸಚಿವ ಸೋಮಣ್ಣ ಹೇಳಿದ್ದಾರೆ.
ಇದು ನನ್ನ ಸವಾಲು ಜೂನ್ ಒಳಗೆ ಈ ಕೆಲಸ ಮಾಡುವುದರಲ್ಲಿ ಸೋತರೆ ರಾಜಕಾರಣವನ್ನೇ ಬಿಡುತ್ತೇನೆ ಎಂದು ಸೋಮಣ್ಣ ಹೇಳಿದ್ದಾರೆ. ಮನೆ ಕಟ್ಟಿಲ್ಲ ಇದರ ಬಗ್ಗೆ ನನಗೆ ದುಃಖವಿದೆ. ನಾನು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದೇನೆ ಎಂದಿದ್ದಾರೆ.