ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸ ದಿಗಂತ ಆನ್ ಲೈನ್ ಡೆಸ್ಕ್:
2021ನೇ ಸಾಲಿನ ‘ಗ್ಲೋಬಲ್ ಟೀಚರ್ ಪ್ರೈಜ್’ ಪಟ್ಟಿಯಲ್ಲಿರುವ 50 ಶಿಕ್ಷಕರ ಪೈಕಿ ಭಾರತದ ಇಬ್ಬರು ಶಿಕ್ಷಕರು ಸ್ಥಾನ ಪಡೆದಿದ್ದಾರೆ.
ಬಿಹಾರದ ಭಾಗಲ್ಪುರದ ಗಣಿತ ಶಿಕ್ಷಕ ಸತ್ಯಮ್ ಮಿಶ್ರಾ ಮತ್ತು ಹೈದರಾಬಾದ್ನ ಇಂಗ್ಲಿಷ್, ಗಣಿತ, ಸಮಾಜ ಅಧ್ಯಯನ ಶಿಕ್ಷಕಿ ಮೇಘನಾ ಮಸುನೂರಿ ಅವರೇ ‘ಗ್ಲೋಬಲ್ ಟೀಚರ್ ಪ್ರೈಜ್’ಗೆ ಪಟ್ಟಿ ಮಾಡಿರುವ ಅಗ್ರ 50 ಶಿಕ್ಷಕರಲ್ಲಿ ಸ್ಥಾನ ಪಡೆದಿರುವ ಭಾರತೀಯ ಶಿಕ್ಷಕರು.
ಪ್ರತಿ ವರ್ಷ ಯುನೆಸ್ಕೋ ಸಹಭಾಗಿತ್ವದಲ್ಲಿ ವರ್ಕೇ ಫೌಂಡೇಶನ್ ಈ ಪ್ರಶಸ್ತಿಯನ್ನು ನೀಡುತ್ತದೆ. ನವೆಂಬರ್ನಲ್ಲಿ ವಿಜೇತರ ಹೆಸರು ಘೋಷಣೆಯಾಗಲಿದೆ. ಪ್ರಶಸ್ತಿಯು 7.30 ಕೋಟಿ ರೂ.ಗಳ ನಗದು ಬಹುಮಾನವನ್ನು ಹೊಂದಿದ್ದು, ಈ ವರ್ಷ 121 ದೇಶಗಳ 8 ಸಾವಿರ ಶಿಕ್ಷಕರು ನಾಮನಿರ್ದೇಶನಗೊಂಡಿದ್ದರು.
ಇದೇ ವೇಳೆ, ಪ್ರಸಕ್ತ ವರ್ಷದಿಂದ ಇದೇ ಸಂಸ್ಥೆಯು “ಜಾಗತಿಕ ವಿದ್ಯಾರ್ಥಿ ಪ್ರಶಸ್ತಿ’ಯನ್ನೂ ಆರಂಭಿಸಿದೆ. ಪಟ್ಟಿಯಲ್ಲಿರುವ 50 ವಿದ್ಯಾರ್ಥಿಗಳ ಪೈಕಿ ಭಾರತದ ನಾಲ್ವರು ವಿದ್ಯಾರ್ಥಿಗಳು ಸ್ಥಾನ ಪಡೆದಿದ್ದಾರೆ.