Wednesday, July 6, 2022

Latest Posts

2022ರ ವೇಳೆಗೆ ಕಾಶ್ಮೀರ ಕಣಿವೆಗೆ ರೈಲು ಸಂಪರ್ಕ: ಅಮಿತ್‌ ಶಾ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಲೋಕಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಪುನರ್‌ರಚನೆ (ತಿದ್ದುಪಡಿ) ಮಸೂದೆ 2021 ಅನ್ನು ಶನಿವಾರ ಧ್ವನಿಮತದಿಂದ ಅಂಗೀಕರಿಸಲಾಯಿತು.
ಅಲ್ಲಿನ ಅಭಿವೃದ್ಧಿಯ ಕುರಿತು ಮಾಹಿತಿ ನೀಡಿದ ಗೃಹ ಸಚಿವ ಅಮಿತ್‌ ಶಾ, ಈ ಪ್ರದೇಶದಲ್ಲಿ ಎರಡು ಎಐಐಎಂಎಸ್‌ ಸ್ಥಾಪನೆ ಕೆಲಸ ಆರಂಭವಾಗಿದೆ. 2022ರ ವೇಳೆಗೆ ಕಣಿವೆಗೆ ರೈಲು ಸಂಪರ್ಕ ಕಲ್ಪಿಸಲಾಗುವುದು. ಇದೀಗ ಜನರಿಂದಲೇ ಆಯ್ಕೆಯಾದವರು ಕಾಶ್ಮೀರದಲ್ಲಿ ಆಡಳಿತ ಮಾಡುವಂತಾಗಿದೆ ಹೊರತು ರಾಜರಿಗೆ ಅಥವಾ ರಾಣಿಯರಿಗೆ ಜನಿಸಿದವರಲ್ಲ. ಕಾಶ್ಮೀರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದ ಬಳಿ ಸಾಕಷ್ಟು ಜಮೀನು ಇದೆ, ಹೀಗಾಗಿ ಜನರ ಜಮೀನನ್ನು ಕಬಳಿಸುವುದಿಲ್ಲ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss