ಹೊಸ ದಿಗಂತ ಆನ್ಲೈನ್ ಡೆಸ್ಕ್:
ಮುಂದಿನ 2030 ರಿಂದ ಬ್ರಿಟನ್ನಲ್ಲಿ ಹೊಸ ಪೆಟ್ರೋಲ್- ಡೀಸೆಲ್ ಕಾರು ಮಾರಾಟ ಸಂಪೂರ್ಣ ನಿಷೇಧವಾಗಲಿದ್ದು, ಇದನ್ನು ಯು.ಕೆ. ಪ್ರಧಾನಿ ಬೋರಿಸ್ ಜಾನ್ಸನ್ ಮುಂದಿನ ವಾರವೇ ಅಧಿಕೃತ ಘೋಷಣೆ ಮಾಡಲಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಫೈನಾನ್ಷಿಯಲ್ ಟೈಮ್ಸ್ ಈ ಬಗ್ಗೆ ವರದಿ ಮಾಡಿದ್ದು, ಜಾನ್ಸನ್ ಮುಂದಿನ ವಾರ ಪರಿಸರ ನೀತಿಯ ಬಗ್ಗೆ ಭಾಷಣ ಮಾಡಲಿದ್ದಾರೆ. ಈ ಸಂದರ್ಭ ಅವರು, ಅಲ್ಲಿ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಿದೆ.
ಈ ಬಗ್ಗೆ ಶನಿವಾರ ಬಿಬಿಸಿ ವಾಹಿನಿ ಕೂಡಾ ವರದಿ ಮಾಡಿತ್ತು. ಆದರೆ ವರದಿಯಲ್ಲಿ ಯಾವುದೇ ಮೂಲಗಳ ಪ್ರಸ್ತಾವ ಮಾಡಿರಲಿಲ್ಲ. ಈ ನಡುವೆ ಡೌನಿಂಗ್ ಸ್ಟ್ರೀಟ್ ವಕ್ತಾರೆ ಮಾತ್ರ ಈ ವರದಿಗಳ ಬಗ್ಗೆಯಾಗಲೀ ಅಥವಾ ಜಾನ್ಸನ್ ರ ಮುಂದಿನ ಭಾಷಣದಲ್ಲಿ ಒಳಗೊಳ್ಳುವ ವಿಷಯಗಳ ಬಗ್ಗೆಯಾಗಲೀ ಮಾಹಿತಿ ನೀಡಲು ನಿರಾಕರಿಸಿದ್ದಾರೆ.
ಬ್ರಿಟನ್ ಮೂಲತಃ ಪೆಟ್ರೋಲ್- ಡೀಸೆಲ್ ಕಾರನ್ನು 2040 ರಿಂದ ನಿಷೇಧಿಸಲು ಯೋಜನೆ ರೂಪಿಸಿತ್ತು. ಹಸಿರುಮನೆ ಅನಿಲ ಹೊರಸೂಸುವಿಕೆ ಪರಿಣಾಮ ಕಡಿಮೆ ಮಾಡುವ ನಿಟ್ಟಿನಲ್ಲಿ ಕಳೆದ ಫೆಬ್ರವರಿಯಲ್ಲಿ ಆ ಅವಧಿಯನ್ನು ಬೋರಿಸ್ ಜಾನ್ಸನ್ 2025 ಕ್ಕೆ ತಂದರು. ವರದಿಯ ಪ್ರಕಾರ ಈ ಅವಽಯನ್ನು ಪ್ರಧಾನಿ ಐದು ವರ್ಷ ಕಡಿಮೆ ಮಾಡಲಿದ್ದಾರೆ.
ಪೆಟ್ರೋಲ್- ಡೀಸೆಲ್ ಕಾರು ಮಾರಾಟವನ್ನು ಕೊನೆ ಮಾಡುವುದರಿಂದ ಯುನೈಟೆಡ್ ಕಿಂಗ್ ಡಮ್ ನ ವಾಹನ ಮಾರುಕಟ್ಟೆಯಲ್ಲಿ ದೊಡ್ಡ ಬದಲಾವಣೆಗೆ ಕಾರಣ ಆಗಲಿದೆ.