ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ರೈಲ್ವೇ ನಿಲ್ದಾಣದಿಂದ ದೆಹಲಿಗೆ ಹೊರಟಿದ್ದ ರೈಲಿನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಅಪರೂಪದ ಪ್ರಬೇಧಗಳ 205 ಆಮೆಗಳನ್ನು ರೈಲ್ವೇ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ನರ್ಕಟಿಯಾಗಂಜ್ ರೈಲು ನಿಲ್ದಾಣದಲ್ಲಿ ರೈಲು ನಿಲ್ಲಿಸಿದ್ದಾಗ ಅಧಿಕಾರಿಗಳು ಅಕ್ರಮ ಮದ್ಯ ಪತ್ತೆಗೆ ಪ್ರಯಾಣಿಕರ ತಪಾಸಣೆ ನಡೆಸುವಾಗ ದಿಂಬಿನ ಕವರ್ ಗಳಲ್ಲಿ ಆಮೆಗಳನ್ನು ತುಂಬಿ ಸಾಗಿಸುತ್ತಿರುವುದು ಪತ್ತೆಯಾಗಿದೆ. ಅಳಿವಿನಂಚಿನಲ್ಲಿರುವ ಅಪರೂಪದ ಪ್ರಬೇಧ ಸೇರಿದಂತೆ ಒಟ್ಟು 205 ಆಮೆಗಳನ್ನು ಸಾಗಿಸಲಾಗುತ್ತಿತ್ತು. ಈ ಜೀವಿಗಳನ್ನು ವನ್ಯಜೀವಿ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದೇವೆ. ಅವುಗಳನ್ನು ಜಲಮೂಲಗಳಿಗೆ ಬಿಡಲಿದ್ದಾರೆ ಎಂದು ರೈಲ್ವೇ ಅಧಿಕಾರಿ ಸಂತೋಷ್ ತಿಳಿಸಿದ್ದಾರೆ.
ಏಷ್ಯಾದ ದೇಶಗಳು ಮತ್ತು ಇತರೆಡೆಗಳಲ್ಲಿ ಔಷಧೀಯ ಉದ್ದೇಶಗಳಿಗಾಗಿ ಈ ಆಮೆಗಳಿಗೆ ಬೇಡಿಕೆಯಿದೆ. ಆ ಉದ್ದೇಶಗಳಿಗಾಗಿ ಅನೇಕ ಮಂದಿ ಆಮೆಗಳನ್ನು ಹಿಡಿದು ಕದ್ದು ಸಾಗಿಸುತ್ತಾರೆ ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ.