ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸ ದಿಗಂತ ವರದಿ, ಮಂಗಳೂರು:
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ 209 ಕೋವಿಡ್ ಸೋಂಕು ಪ್ರಕರಣ ಗಳು ವರದಿಯಾಗಿವೆ. 9 ಸಾವು ಸಂಭವಿಸಿದೆ.
ಬುಧವಾರ ಗುಣಮುಖರಾದವರ ಸಂಖ್ಯೆ 374. ಜಿಲ್ಲೆಯ ಪಾಸಿಟಿವಿಟಿ ದರವೂ ಶೇ.2.71ಕ್ಕೆ ಆಗಿದೆ. ಜಿಲ್ಲೆಯಲ್ಲಿ 2,406 ಕೋವಿಡ್ ಸಕ್ರಿಯ ಪ್ರಕರಣಗಳಿವೆ.
ಈ ತನಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 79,531 ಮಾಸ್ಕ್ ಉಲ್ಲಂಘನೆಯ ಪ್ರಕರಣಗಳು ದಾಖಲಾಗಿವೆ. ರೂ.96,99,867 ದಂಡ ವಸೂಲಿ ಮಾಡಲಾಗಿದೆ.