ದಿನಭವಿಷ್ಯ | ಹೀಗಿದೆ ಬುಧವಾರದ ರಾಶಿಫಲ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮೇಷ
ಖಾಸಗಿ ಬದುಕು, ವೃತ್ತಿ ಮತ್ತು ಆರೋಗ್ಯ ಎಲ್ಲದರಲ್ಲೂ ಇಂದು ನಿಮಗೆ ಪ್ರತಿಕೂಲ ಪರಿಸ್ಥಿತಿ. ನಾಜೂಕಿನಿಂದ ವರ್ತಿಸಬೇಕಾದ ಸಮಯವಿದು.

ವೃಷಭ
ಆದಾಯ ಹೆಚ್ಚಳಕ್ಕೆ ಮನ ಮಾಡುತ್ತೀರಿ. ಆದರೆ ಸೂಕ್ತ ದಾರಿ ಹೊಳೆಯದು. ಕೌಟುಂಬಿಕ ಸಮಸ್ಯೆ ಕೂಡಾ ಕಾಡುವುದು. ಅಸಹಕಾರ ಹೆಚ್ಚು.

ಮಿಥುನ
ಇತರರ ಒತ್ತಡಕ್ಕೆ, ಆಮಿಷಕ್ಕೆ ಮಣಿದು ನಿಮ್ಮ ಹಿತಾಸಕ್ತಿ ಬಲಿ ಕೊಡಬೇಡಿ. ನಿಮ್ಮ ಒಳಿತಿಗೆ ತಕ್ಕುದಾದ ಕಾರ್ಯ ಕೈಗೊಳ್ಳಲು ಹಿಂಜರಿಕೆ ಬೇಡ.

ಕಟಕ
ನಿಮ್ಮ ಚಿಂತನೆಗಳು ಇತರರಿಂದ ಮಾನ್ಯತೆ ಪಡೆಯುತ್ತವೆ. ಸಂಬಂಧದಲ್ಲಿ ಮೂಡಿದ್ದ ಭಿನ್ನಾಭಿಪ್ರಾಯ ನಿವಾರಣೆ, ಸೌಹಾರ್ದ ಮೂಡುವುದು.

ಸಿಂಹ
ಮನೆ ಮತ್ತು ಕೆಲಸದ ಜಾಗದಲ್ಲಿ ಇತರರ ಜತೆ ಭಿನ್ನಾಭಿಪ್ರಾಯ ಹೆಚ್ಚುವುದು. ಇತರರು ಬಗ್ಗದಿದ್ದರೆ, ನೀವೇ ಹೊಂದಿಕೊಂಡು ಹೋಗಬೇಕು.

ಕನ್ಯಾ
ನಿಮ್ಮ ಕೋಪವನ್ನು ನಿಯಂತ್ರಣ ಮಾಡಿಕೊಳ್ಳಬೇಕು. ಇಲ್ಲವಾದರೆ ಸಂಘರ್ಷಕ್ಕೆ ಹೇಚ್ಚಿತು. ಹೊರಗಿನ ತಿಂಡಿ  ನಿಮ್ಮ ಹೊಟ್ಟೆ ಕೆಡಿಸಬಹುದು.

ತುಲಾ
ಭಾವನಾತ್ಮಕ ತಲ್ಲಣ.  ಇದರಿಂದಾಗಿ ತಾರ್ಕಿಕ ವಾಗಿ ಚಿಂತಿಸಲೂ ವಿಫಲರಾಗುವಿರಿ. ಅವಸರದ ನಿರ್ಧಾರ ತಾಳದಿರಿ. ಇತರರ ಸಲಹೆ ಪಡೆಯಿರಿ.

ವೃಶ್ಚಿಕ
ಆರೋಗ್ಯ ಸಮಸ್ಯೆ ಇದ್ದರೆ ವೈದ್ಯರನ್ನು ಕಾಣಿ. ನಿರ್ಲಕ್ಷ್ಯ ಬೇಡ. ಆರ್ಥಿಕ ಸಮಸ್ಯೆ ಇಂದು ಪರಿಹಾರ ಕಾಣುವುದು, ಪರಿಚಿತರಿಂದ ನೆರವು ಒದಗುವುದು.

ಧನು
ನಿಮ್ಮ ಕಾರ್ಯವನ್ನು ಸಮರ್ಥವಾಗಿ ಮಾಡುವ ಮೂಲಕ ಮೆಚ್ಚುಗೆ ಪಡೆಯುವಿರಿ. ಮನೆಯಲ್ಲಿ ಸೌಹಾರ್ದ ವಾತಾವರಣ. ಚಿಂತೆ ಕರಗುವುದು.

ಮಕರ
ದುಡ್ಡಿನ ನಿರ್ವಹಣೆ ಸರಿಯಾಗಿ ಮಾಡಿರಿ. ಇಲ್ಲವಾದರೆ ಸಮಸ್ಯೆಗೆ ಸಿಲುಕುವಿರಿ. ಕೆಲವು ಸಣ್ಣ ವಿಷಯಗಳು ಹೆಚ್ಚು ಚಿಂತೆಗೆ ಕಾರಣ, ಮನಶ್ಯಾಂತಿ ದೂರ.

ಕುಂಭ
ವೃತ್ತಿಯಲ್ಲಿ ನಿಮಗೆ ಒಪ್ಪಿಸಿದ ಕಾರ್ಯ ಸರಿಯಾಗಿ ನಿರ್ವಹಿಸಿ. ಇತರರನ್ನು ಅದಕ್ಕೆ ಅವಲಂಬಿಸದಿರಿ. ಬೆನ್ನ ಹಿಂದೆ ಇರಿಯುವವರು ಇದ್ದಾರೆ, ಜೋಕೆ.

ಮೀನ
ಕೌಟುಂಬಿಕ ಭಿನ್ನಮತವು ವಿಕೋಪಕ್ಕೆ ಹೋಗದಂತೆ ನೋಡಿಕೊಳ್ಳಿ. ಸಂಧಾನದ ದಾರಿ ಹುಡುಕಿ. ವೃತ್ತಿಯಲ್ಲಿ ಹೆಚ್ಚಿನ ಒತ್ತಡ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!