ಭಾರತದ 70 ಸ್ಟಾರ್ಟಪ್‌ ಗಳಿಂದ 21 ಸಾವಿರ ಉದ್ಯೋಗ ಕಡಿತ- ಇನ್ನೂ ಮುಂದುವರೆಯಲಿದೆ ಎನ್ನುತ್ತಿವೆ ವರದಿಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕೋವಿಡ್‌ ಪೂರ್ವ ಆರ್ಥಿಕ ಪರಿಸ್ಥಿತಿಗಳು, ರಷ್ಯಾ ಉಕ್ರೇನ್‌ ಯುದ್ಧದ ಪರಿಣಾಮ ಪೂರೈಕೆ ಸರಪಳಿಯಲ್ಲಿ ವ್ಯತ್ಯಯ ಮುಂತಾದ ಕಾರಣಗಳಿಂದ ಜಾಗತಿಕವಾಗಿ ಆರ್ಥಿಕ ಕುಸಿತದ ಭೀತಿ ಎದುರಾಗಿದ್ದು ದೊಡ್ಡ ದೊಡ್ಡ ಜಾಗತಿಕ ಕಂಪನಿಗಳೆಲ್ಲ ವೆಚ್ಚಕಡಿತದ ಕ್ರಮಗಳನ್ನು ಕೈಗೊಂಡಿದ್ದು ಭಾರೀ ಪ್ರಮಾಣದಲ್ಲಿ ಉದ್ಯೋಗ ಕಡಿತಗಳನ್ನು ನಡೆಸಿವೆ. ಭಾರತದಲ್ಲಿಯೂ ಈ ಆರ್ಥಿಕ ಚಳಿಗಾಲದ ಪರಿಣಾಮ ನವೋದ್ದಿಮೆಗಳು ಸಂಕಷ್ಟಕ್ಕೆ ಸಿಲುಕಿದ್ದು ಹಣಕಾಸಿನ ಕೊರತೆಯಿಂದಾಗಿ ಉದ್ಯೋಗಿಗಳಿಗೆ ಪಿಂಕ್‌ ಸ್ಲಿಪ್‌ ನೀಡುತ್ತಿವೆ.

ವರದಿಯೊಂದರ ಪ್ರಕಾರ ಕಳೆದ 3-4 ತಿಂಗಳುಗಳಲ್ಲಿ ಭಾರತದ ಹೆಚ್ಚುಕಡಿಮೆ 70 ನವೋದ್ದಿಮೆಗಳು 21 ಸಾವಿರಕ್ಕೂ ಅಧಿಕ ಟೆಕ್ಕಿಗಳನ್ನು ಮನೆಗೆಕಳಿಸಿವೆ. ಭಾರತದ ನವೋದ್ದಿಮೆ ಕ್ಷೇತ್ರದಲ್ಲಿ ಹೆಸರುಗಳಿಸಿರುವ BYJU’S, Ola, MPL, Innovaccer, Uncademy, Vedantu, Cars24, OYO, Meesho, Udaan ಮುಂತಾದ ಕಂಪನಿಗಳು ಉದ್ಯೋಗಿಗಳನ್ನು ಹೊರಹಾಕಿವೆ. edtech ವಲಯವು ಹೆಚ್ಚಿನ ಉದ್ಯೋಗಿಗಳನ್ನು ವಜಾಗೊಳಿಸಿದ್ದು, 16 edtech ಸ್ಟಾರ್ಟ್‌ಅಪ್‌ಗಳು ಇಲ್ಲಿಯವರೆಗೆ 8,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿವೆ.

ಹೊಸವರ್ಷದಲ್ಲಿಯೂ ಉದ್ಯೋಗ ಕಡಿತಗಳು ಮುಂದುವರೆದಿದ್ದು 16 ಕ್ಕೂ ಹೆಚ್ಚು ಸ್ವದೇಶಿ ಸ್ಟಾರ್ಟ್‌ಅಪ್‌ಗಳು ಉದ್ಯೋಗಿಗಳನ್ನು ವಜಾಗೊಳಿಸಿದೆ.
ಸಾಮಾಜಿಕ ಮಾಧ್ಯಮ ಕಂಪನಿ ಶೇರ್‌ಚಾಟ್ ತನ್ನ ಶೇಕಡಾ 20 ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದೆ. ಶೇರ್‌ಚಾಟ್ ಸುಮಾರು 2,300 ಉದ್ಯೋಗಿಗಳನ್ನು ಹೊಂದಿದ್ದು ವಜಾಗೊಳಿಸುವಿಕೆಯು ಕಂಪನಿಯಲ್ಲಿ ಸುಮಾರು 500 ಜನರನ್ನು ಪ್ರಭಾವಿಸಿದೆ. Healthtech ಯುನಿಕಾರ್ನ್‌ Innovaccer ಸುಮಾರು 245 ಉದ್ಯೋಗಿಗಳನ್ನು  ವಜಾಗೊಳಿಸಿದೆ.

ಆನ್‌ಲೈನ್ ಆಹಾರ ವಿತರಣಾ ವೇದಿಕೆ ಸ್ವಿಗ್ಗಿ ಕಂಪನಿಯು 380 ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವುದಾಗಿ ದೃಢಪಡಿಸಿದೆ. ಭಾರತದಲ್ಲಿ ಎಂಡ್-ಟು-ಎಂಡ್ ಡಿಜಿಟಲ್ ಹೆಲ್ತ್‌ಕೇರ್ ಪ್ಲಾಟ್‌ಫಾರ್ಮ್ ಆದ ಮೆಡಿಬಡ್ಡಿ, ಎಲ್ಲಾ ವಿಭಾಗಗಳಲ್ಲಿ ಸುಮಾರು 200 ಜನರನ್ನು ವಜಾಗೊಳಿಸಿದೆ. ಆನ್‌ಲೈನ್ ವಾಹನ ರಿಪೇರಿ ಪ್ಲಾಟ್‌ಫಾರ್ಮ್ GoMechanic,ಅದರ 70 ಪ್ರತಿಶತದಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದೆ.ವರದಿಗಳ ಪ್ರಕಾರ ಉಳಿದ ಸಿಬ್ಬಂದಿಯನ್ನು ಮೂರು ತಿಂಗಳವರೆಗೆ ವೇತನವಿಲ್ಲದೆ ಕೆಲಸ ಮಾಡಲು ಕಂಪನಿ ಹೇಳಿದೆ. ಸಾಫ್ಟ್‌ವೇರ್-ಆಸ್-ಎ-ಸರ್ವೀಸ್ (SaaS) ಧ್ವನಿ ಯಾಂತ್ರೀಕೃತ ಸ್ಟಾರ್ಟ್‌ಅಪ್ Skit.ai 115 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೋಗಲು ಕೇಳಿಕೊಂಡಿದೆ. ಐಟಿ ದೈತ್ಯ ವಿಪ್ರೋ ಸಹ ಕಳಪೆ ಪ್ರದರ್ಶನದ ಕಾರಣ ನೀಡಿ 400 ಕ್ಕೂ ಹೆಚ್ಚು ಹೊಸ ಉದ್ಯೋಗಿಗಳನ್ನು ವಜಾಗೊಳಿಸಿದೆ.

ಇನ್ನೂ ಕೂಡ ಆರ್ಥಿಕ ಚಳಿಗಾಲ ಮುಂದುವರೆದಿರುವುದರಿಂದ ಮುಂದಿನ ತಿಂಗಳು ಗಳಲ್ಲಿ ಉದ್ಯೋಗ ಕಡಿತಗಳು ಇನ್ನೂ ಮುಂದುವರೆಯಲಿದೆ ಎಂದು ಮೂಲಗಳ ವರದಿ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!