ಬಿಹಾರದಲ್ಲಿ 60 ಅಡಿ ಉದ್ದದ ಉಕ್ಕಿನ ಸೇತುವೆಯನ್ನೇ ಕದ್ದ ಖತರ್ನಾಕ್ ಖದೀಮರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಬಿಹಾರದ ರೋಹ್ತಾಸ್ ಜಿಲ್ಲೆಯಲ್ಲಿ ವಿಚಿತ್ರ ರೀತಿಯ ಕಳ್ಳತನ ನಡೆದಿದೆ. 60 ಅಡಿ ಉಕ್ಕಿನ ಸೇತುವೆಯನ್ನು ಕಳ್ಳರು ಅಪಹರಿಸಿದ್ದಾರೆ. ಸ್ಥಳೀಯ ಅಧಿಕಾರಿಗಳು ಮತ್ತು ಗ್ರಾಮಸ್ಥರಿಗೆ ಮಕ್ಮಲ್‌ ಟೋಪಿ ಹಾಕಿ ಇಂತಹ ಕಿರಾತಕ ಕೃತ್ಯ ಮಾಡಿದ್ದಾರೆ. ಸರ್ಕಾರಿ ಅಧಿಕಾರಿಗಳಂತೆ ಆಗಮಿಸಿ ಎಲ್ಲರನ್ನು ಯಾಮಾರಿಸಿ ಮೂರು ದಿನದಲ್ಲಿ ಗ್ಯಾಸ್ ಕಟ್ಟರ್ ಮತ್ತು ಅರ್ಥ್ ಮೂವರ್ ಯಂತ್ರಗಳನ್ನು ಬಳಸಿ 60 ಅಡಿ ಉದ್ದದ ಇಡೀ ಸೇತುವೆಯನ್ನು ಕದ್ದೊಯ್ದಿದ್ದಾರೆ ಎಂದು ನೀರಾವರಿ ಅಧಿಕಾರಿಗಳು ತಿಳಿಸಿದ್ದಾರೆ.
ನೀರಾವರಿ ಅಧಿಕಾರಿಗಳ ಸೋಗಿನಲ್ಲಿ ಬಂದ ಕಿರಾತಕರು ಇಲಾಖೆಯಿಂದ ಸೇತುವೆ ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ ಎಂದು ಜನರನ್ನು ನಂಬಿಸಿದ್ದಾರೆ. ಜೊತೆಗೆ ಸೇತುವೆ ಕೆಡವುವ ಕಾರ್ಯದಲ್ಲಿ ಗ್ರಾಮಸ್ಥರ ಸಹಕಾರ ವನ್ನೂ ಪಡೆದಿದ್ದಾರೆ. ಬಳಿಕ ಸುಮಾರು 500 ಟನ್ ಕಬ್ಬಿಣದೊಂದಿಗೆ ದರೋಡೆಕೋರರು ಪರಾರಿಯಾಗಿದ್ದಾರೆ. ಈ ವಿಚಾರ ತಡವಾಗಿ ಅಧಿಕಾರಿಗಳ ಗಮನಕ್ಕೆ ಬಂದಿದೆ. ಕೂಡಲೇ ನೀರಾವರಿ ಅಧಿಕಾರಿಗಳು ನಸ್ರಿಗಂಜ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
1972 ರಲ್ಲಿ ಅರಾಹ್ ಕಾಲುವೆಯ ಮೇಲೆ ಸೇತುವೆಯನ್ನು ನಿರ್ಮಿಸಲಾಯಿತು. ಸೇತುವೆ ಸಂಪೂರ್ಣ ಹಳೆಯದಾಗಿದ್ದು, ಶಿಥಿಲಗೊಂಡಿತ್ತು. ಹಾಗಾಗಿ ಸ್ಥಳೀಯ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಜನ ಆ ಸೇತುವೆ ಬಳಸುವುದನ್ನು ನಿಲ್ಲಿಸಿ, ಬದಲಿ ರಸ್ತೆ ಅನುಸರಿಸುತ್ತಿದ್ರು. ಇದನ್ನೇ ಬಂಡವಾಳ ಮಾಡಿಕೊಂಡ ದರೋಡೆಕೋರರು ಅಧಿಕಾರಿಗಳಂತೆ ನಟಿಸಿ ಎಲ್ಲವನನು ಗುಡುಸಿ ಗುಂಡಾಂತರ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!