Friday, August 19, 2022

Latest Posts

ವಿಶ್ವದ 30 ಹೆಚ್ಚಿನ ಕಲುಷಿತ ನಗರಗಳಲ್ಲಿ 22 ಭಾರತದಲ್ಲಿವೆ!

ಹೊಸದಿಗಂತ ಆನ್ ಲೈನ್ ಡೆಸ್ಕ್:

ಜಾಗತಿಕವಾಗಿ ಅತ್ಯಂತ ಹೆಚ್ಚಿನ ಕಲುಷಿತ ರಾಜಧಾನಿಗಳ ಪೈಕಿ ನವದೆಹಲಿ ಅಗ್ರ ಸ್ಥಾನದೊಂದಿಗೆ ವಿಶ್ವದ 30 ಹೆಚ್ಚಿನ ಕಲುಷಿತ ನಗರಗಳಲ್ಲಿ 22 ಭಾರತದಲ್ಲಿವೆ ಎಂದು ವರದಿಯೊಂದು ತಿಳಿಸಿದೆ.
ಸ್ವಿಸ್ ಸಂಸ್ಥೆ ಐಕ್ಯೂಏರ್ ಸಿದ್ಧಪಡಿಸಿರುವ ವಿಶ್ವ ವಾಯು ಗುಣಮಟ್ಟ ವರದಿ 2020 ಜಾಗತಿಕವಾಗಿ ಬಿಡುಗಡೆಯಾಗಿದ್ದು, 2019ರಿಂದ 2020ರವರೆಗೂ ದೆಹಲಿಯ ವಾಯು ಗುಣಮಟ್ಟದಲ್ಲಿ ಸುಮಾರು ಶೇ. 15 ರಷ್ಚು ಸುಧಾರಣೆಯಾಗಿರುವುದಾಗಿ ವರದಿಯಲ್ಲಿ ಹೇಳಲಾಗಿದೆ.
ವಿಶ್ವದಲ್ಲಿ ಮಾಲಿನ್ಯಗೊಂಡ ರಾಜಧಾನಿಗಳ ಪೈಕಿ ದೆಹಲಿ ಅಗ್ರಸ್ಥಾನದಲ್ಲಿದ್ದು, ಮಾಲಿನ್ಯಗೊಂಡ ನಗರಗಳ ಪೈಕಿ 10ನೇ ಸ್ಥಾನದಲ್ಲಿದೆ. ಜಾಗತಿಕವಾಗಿ ಮಾಲಿನ್ಯಗೊಂಡ ನಗರಗಳ ಪೈಕಿ 22 ನಗರಗಳು ಭಾರತದಲ್ಲಿರುವುದಾಗಿ ವರದಿ ತಿಳಿಸಿದೆ.
ದೆಹಲಿ ಹೊರತುಪಡಿಸಿದಂತೆ ಇತರ 21 ನಗರಗಳು ವಿಶ್ವದ 30 ಹೆಚ್ಚಿನ ಕಲುಷಿತ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಗಾಜಿಯಾಬಾದ್, ಬುಲಂದ್ ಷಹರ್, ಬಿಸ್ರಾಕ್ ಜಲಾಲ್ ಪುರ, ನೊಯ್ಡಾ, ಗ್ರೇಟರ್ ನೊಯ್ಡಾ, ಕಾನ್ಫುರ, ಲಖನೌ, ಮೀರತ್, ಅಗ್ರಾ, ಉತ್ತರ ಪ್ರದೇಶದ ಮುಜಾಫರ್ ನಗರ, ರಾಜಸ್ಥಾನದ ಬಿವಾನಿ ಫಾರಿದಾಬಾದ್, ಜಿಂದ್, ಹಿಸಾರ್, ಫತ್ತೆಹಾಬಾದ್, ಬಂದ್ವಾರಿ, ಗುರುಗ್ರಾಮ, ಯಮುನಾ ನಗರ, ರೊಹ್ಟಕ್, ಮತ್ತು ಹರಿಯಾದ ಧರುಹೇರಾ, ಬಿಹಾರದ ಮುಜಾಫರ್ ಪುರ್ ನಗರ ಹೆಚ್ಚಿನ ಕಲುಷಿತ ನಗರಗಳಾಗಿವೆ.
ಗಾಜಿಯಾಬಾದ್ ವಿಶ್ವದಲ್ಲಿಯೇ ಎರಡನೇ ಹೆಚ್ಚಿನ ಕಲುಷಿತ ನಗರವಾಗಿದ್ದು, ಬುಲಂದ್ ಷಹರ್, ಬಿಸ್ರಾಕ್ ಜಲಾಲ್ ಪುರ್, ನೊಯ್ಡಾ, ಗ್ರೇಟರ್ ನೊಯ್ಡಾ, ಕಾನ್ಫುರ, ಲಖನೌ ಮತ್ತು ಬಿವಾಯ್ ನಂತರದ ಸ್ಥಾನದಲ್ಲಿವೆ. 106 ರಾಷ್ಟ್ರಗಳಿಂದ ಪಿಎಂ 2.5 ಡಟಾ ಆಧಾರದ ಮೇಲೆ ಜಾಗತಿಕವಾಗಿ ನಗರಗಳ ಶ್ರೇಯಾಂಕ ವರದಿ ತಯಾರಿಸಲಾಗಿದೆ.
ದೇಶದಲ್ಲಿ ವಾಯು ಮಾಲಿನ್ಯ ಹೆಚ್ಚಾಗಲು ಮುಖ್ಯವಾಗಿ, ಸಾರಿಗೆ, ಅಡುಗೆಗಾಗಿ ಸುಡುವುದಿ, ವಿದ್ಯುತ್ ಛಕ್ತಿ ಉತ್ಪಾದನೆ, ಉದ್ಯಮ, ಕಟ್ಟಡ. ತ್ಯಾಜ್ಯ ಸುಡುವುದು ಮತ್ತಿತರ ಕಾರಣಗಳಿಂದ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!