ಹೊಸ ದಿಗಂತ ವರದಿ, ತುಮಕೂರು:
ದುರದೃಷ್ಟಾವಶಾತ್ ಭಾರತೀಯ ಭಾಷೆಗಳಿಗೆ ಬೇಕಾದ ಪೋಷಣೆ ದೊರಕದೆ ದೇಶದ 220 ಭಾಷೆಗಳು ಕಳೆದ 50 ವರ್ಷಗಳಲ್ಲಿ
ನಶಿಸಿ ಹೋಗಿವೆ,ವಿನಾಶದ ಅಂಚಿನಲ್ಲಿವೆ ಎಂದು ವಿಪ್ರೊ ವಿಶ್ರಾಂತ ಅಧ್ಯಕ್ಷರಾದ ಡಾ.ಕೃಷ್ಣಸ್ವಾಮಿ ಕಸ್ತೂರಿ ರಂಗನ್ ಹೇಳಿದರು.
ಇಂದು ತುಮಕೂರು ವಿವಿ 14ನೇ ಘಟಿಕೋತ್ಸವ ಭಾಷಣ ಮಾಡುತ್ತಿದ್ದರು.
ಅಧಿಕೃತವಾಗಿ ಪಟ್ಟಿ ಮಾಡದ ಕೆಲವು ಭಾಷೆಗಳು. ಅಂದರೆ ಎಂಟನೇ ಪರಿಶ್ಚೇದದಲ್ಲಿ ಇರುವ 22ಭಾಷೆಗಳಂತೆ ಬಹಳ ಸಂಕಷ್ಟಗಳನ್ನು
ಎದುರಿಸುತ್ತಿವೆ ಎಂದರು.
ಈ ಹಿನ್ನೆಲೆಯಲ್ಲಿ ನೂತನ ಶಿಕ್ಷಣ ನೀತಿಯು ಭಾರತೀಯ ಭಾಷೆಗಳ ಕಲಿಕೆ ಮತ್ತು ಪಾಠವನ್ನು ಪ್ರಾಥಮಿಕ ಮತ್ತು ಉನ್ನತ ಶಿಕ್ಷಣಗಳಲ್ಲಿ ಒಂದಾಗಿಸುವಂತೆ ಶಿಫಾರಸು ಮಾಡಲಾಗಿದೆ ಎಂದರು.
ಹೊಸಶಿಕ್ಷಣ ನೀತಿಯು ಭಾರತೀಯ. ಪ್ರಾದೇಶಿಕ ಆಧುನಿಕ ಮತ್ತು ಪ್ರಾಚೀನ ಭಾಷೆಗಳ ಶಿಕ್ಷಣ ಮತ್ತು ಸಂಶೋಧನೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಪ್ರಸ್ತಾಪ ಮಾಡಿದೆ ಎಂದರು.
ಸೆಂಟರ್ ಫಾರ್ ಎಕ್ಸಲೆನ್ಸ್ಇನ್ ಎಜುಕೇಷನ್ ಸ್ಥಾಪಿಸಿ ಬಿಇಡಿ ಮತ್ತು ಎಂಇಡಿ ಕೋರ್ಸುಗಳನ್ನು ಲಭ್ಯಗೊಳಿಸಿ ಬಹುಭಾಷಾ ಶಿಕ್ಷಕರನ್ನು ಸಿದ್ಧ ಪಡಿಸುವ ಕೆಲಸ ತುಮಕೂರು ನಿಧಿಯಿಂದ ಆಗಬೇಕಿದೆ ಎಂದರು.
ಶಿಕ್ಷಣ ಎಂಬುದು ಒಂದೇ ಹೆಜ್ಜೆಯಲ್ಲಿ ಪೂರ್ಣಗೊಳ್ಳುವ ಪ್ರಕ್ರಿಯೆ ಅಲ್ಲ. ವ್ಯಕ್ತಿತ್ವ ನಿರ್ಮಾಣದ ಹಿನ್ನೆಲೆಯಲ್ಲಿ ನಿರಂತರ ಪ್ರಯತ್ನ ಹಾಕಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಿಜ ಶಿಕ್ಷಣವು ವಿದ್ಯಾರ್ಥಿಗಳ ಬೆಳವಣಿಗೆ ಆತನ ಮಾನಸಿಕ. ಭೌತಿಕ.ಆಧ್ಯಾತ್ಮಿಕ ನೆಲೆಗಳಲ್ಲಿ ಸಾಧ್ಯಗೊಳಿಸುತ್ತದೆ ಎಂದರು.