7 ವರ್ಷದಲ್ಲಿ 2239 ಭೂಕುಸಿತ: ದೇಶದಲ್ಲಿ ಕೇರಳದ್ದೇ ಸಿಂಹಪಾಲು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೇಶಾದ್ಯಂತ ಕಳೆದ 7 ವರ್ಷಗಳಲ್ಲಿ ಕೇರಳದಲ್ಲಿ ಸುಮಾರು 2,239 ಭೂಕುಸಿತಗಳು ಸಂಭವಿಸಿವೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಬುಧವಾರ ಲೋಕಸಭೆಗೆ ತಿಳಿಸಿದರು. ದೇಶದಲ್ಲಿ ಸಂಭವಿಸುತ್ತಿರುವ ಪ್ರಾಕೃತಿಕ ದುರಂತಗಳ ಕುರಿತು ಸರ್ಕಾರ ಗಮನ ಹರಿಸುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಂಗ್, ದೇಶಾದ್ಯಂತ 7 ವರ್ಷಗಳಲ್ಲಿ ಒಟ್ಟು 3,782 ಭೂಕುಸಿತ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ಕೇರಳದಲ್ಲಿ ಅತೀ ಹೆಚ್ಚು 2239 ಭೂಕುಸಿತಗಳು ಸಂಭವಿಸಿದರೆ, ಪಶ್ಚಿಮ ಬಂಗಾಳ ಎರಡನೇ ಅತೀ ಹೆಚ್ಚು 376 ಭೂಕುಸಿತಗಳು ಸಂಭವಿಸಿವೆ ಎಂದು ವಿವರಿಸಿದರು. ಗಣಿ ಸಚಿವಾಲಯ, ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ಭೂಕುಸಿತ ಕುರಿತು ವರದಿ ನೀಡಿದೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!