ರೇವು ಪಾರ್ಟಿಯಲ್ಲಿ 23ವರ್ಷದ ಯುವಕ ಸಾವು, ಓವರ್‌ ಡೋಸ್ ಡ್ರಗ್ಸ್‌ ಸೇವನೆಯ ಶಂಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಚೆನ್ನೈನ ಕೊಯಮತ್ತೂರು ಬಳಿಯ ಮಾಲ್ ಒಂದರಲ್ಲಿ ನಡೆದ ರೇವು ಪಾರ್ಟಿಯಲ್ಲಿ ವಿದೇಶಿ ಮದ್ಯ ಸೇವಿಸಿದ 23 ವರ್ಷದ ಯುವಕ ಸಾವನ್ನಪ್ಪಿದ್ದಾನೆ. ಘಟನೆ ಬಳಿಕ ರೇವು ಪಾರ್ಟಿ ಸ್ಥಗಿತಗೊಂಡಿದೆ. ಚೆನ್ನೈನ ಬೇರೆ ಬೇರೆ ಪ್ರದೇಶಗಳಲ್ಲಿ ವಾರಾಂತ್ಯ ಪಾರ್ಟಿಗಳು ಹೆಚ್ಚಾಗಿ ನಡೆಯುತ್ತವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕೊಯಮತ್ತೂರು ಸಮೀಪದ ಮಾಲ್‌ನಲ್ಲಿ ಪೊಲೀಸರ ಅನುಮತಿ ಪಡೆಯದೇ ರೇವ್ ಪಾರ್ಟಿ ನಡೆಸಿರುವುದಾಗಿ ಬೆಳಕಿಗೆ ಬಂದಿದೆ.

ಪಾರ್ಟಿಯಲ್ಲಿ ಬ್ರೆಜಿಲ್‌ನ ಪ್ರಮುಖ ಡಿಜೆ ಮನ್ರೋ ಗ್ರೋವಾ ರಾಕ್ ಸಂಗೀತವನ್ನು ಆಯೋಜಿಸಿದ್ದರು. ವಿದೇಶಿ ಮದ್ಯ ಕುಡಿದು ಅಮಲೇರಿದ ಮಡಿಪಾಕ್ಕಂನ ಎಸ್ ಪ್ರವೀಣ್ ಎಂಬ ಯುವಕ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಈ ಬಗ್ಗೆ ಮಾಹಿತಿ ಪಡೆದ ಅಣ್ಣಾನಗರ ಪೊಲೀಸರು ಸ್ಥಳಕ್ಕಾಗಮಿಸಿ ರೇವು ಪಾರ್ಟಿಯನ್ನು ತಡೆದಿದ್ದಾರೆ.

ಅಲ್ಲಿದ್ದ ಯುವಜನತೆಯನ್ನು ಹೊರಗೆ ಕಳುಹಿಸಿ ಪಾರ್ಟಿ ಆಯೋಜಕರನ್ನು ವಶಕ್ಕೆ ತೆಗೆದುಕೊಂಡರು.  ಪ್ರಜ್ಞೆ ತಪ್ಪಿದ ಪ್ರವೀಣ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮಿತಿಮೀರಿದ ಡ್ರಗ್ಸ್ ಸೇವನೆಯೇ ಅವರ ಸಾವಿಗೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸ್ಥಳಾಂತರಿಸಲಾಗಿದೆ. ವಿದೇಶಿ ಮದ್ಯದ ಬಾಟಲಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪಾರ್ಟಿಯಲ್ಲಿ ಡ್ರಗ್ಸ್ ಸೇವನೆ ಬಗ್ಗೆ ಶಂಕೆ ವ್ಯಕ್ತವಾಗಿದೆ. ಆ ನಿಟ್ಟಿನಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!