7 ತಿಂಗಳಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಹಿಳೆಗೆ ನಾರ್ಮಲ್ ಡೆಲಿವರಿ: ಹುಟ್ಟಿದ ಮಗು ಸುರಕ್ಷಿತ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ದ್ವಿಚಕ್ರ ವಾಹನ ಚಾಲಕರು ಹಾಗೂ ಹಿಂದೆ ಕುಳಿತವರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂಬ ನಿಯಮವಿದೆ. ಆದರೆ ಆ ನಿರ್ಲಕ್ಷ್ಯದ ಫಲವಾಗಿ ಏಳೆಂಟು ತಿಂಗಳಿಂದ ಗರ್ಭಿಣಿಯೊಬ್ಬಳು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ಅಪಘಾತದಲ್ಲಿ ಗಾಯಗೊಂಡು ಏಳು ತಿಂಗಳಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಹಿಳೆ ಮುದ್ದು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಅಪರೂಪದ ಘಟನೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.

ಉತ್ತರ ಪ್ರದೇಶದ ಬುಲಂದ್‌ಶಹರ್‌ನ 23 ವರ್ಷದ ಮಹಿಳೆಯೊಬ್ಬರು ಏಪ್ರಿಲ್ 1, 2022 ರ ಮುಂಜಾನೆ ತನ್ನ ಪತಿಯೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ನವವಿವಾಹಿತೆ ರಸ್ತೆ ಅಪಘಾತಕ್ಕೊಳಗಾದರು. ಗಂಡ ಹೆಂಡತಿ ಇಬ್ಬರೂ ಹೆಲ್ಮೆಟ್ ಧರಿಸಿರಲಿಲ್ಲ. ಅದೃಷ್ಟವಶಾತ್ ಗಂಡ ಅಪಾಯದಿಂದ ಪಾರಾಗಿದ್ದು, ಆದರೆ ಆಕೆಯ ತಲೆಗೆ ಬಲವಾದ ಪೆಟ್ಟು ಬಿದ್ದು ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಳು.

ಅಪಘಾತದ ಸಮಯದಲ್ಲಿ ಆಕೆ ಗರ್ಭಿಣಿಯಾಗಿದ ವಿಚಾರವನ್ನು ವೈದ್ಯರು ಕಂಡುಕೊಂಡರು. ಅಂತಹ ದಯನೀಯ ಸ್ಥಿತಿಯಲ್ಲೂ ಆಕೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ ವೈದ್ಯರು ಹಲವಾರು ಶಸ್ತ್ರಚಿಕಿತ್ಸೆ ಜೊತೆಗೆ ಗರ್ಭದಲ್ಲಿರುವ ಮಗುವಿನ ಆರೈಕೆಯನ್ನೂ ಮಾಡಿದರು. ಏಳು ತಿಂಗಳ ಬಳಿಕ ಹೆಣ್ಣು ಮಗುವಿಗೆ ಜನ್ಮ ನೀಡಿದಳು.

ಈ ಘಟನೆಯ ಬಗ್ಗೆ ಏಮ್ಸ್ ನರಶಸ್ತ್ರಚಿಕಿತ್ಸಕ ಡಾ.ದೀಪಕ್ ಗುಪ್ಲಾ ಮಾತನಾಡಿ, ಅಪಘಾತದ ಸಮಯದಲ್ಲಿ ಅವರು 40 ದಿನಗಳ ಗರ್ಭಿಣಿ. ಕೂಡಲೇ ಮಗುವಿನ ಆರೋಗ್ಯ ತಪಾಸಣೆ ನಡೆಸಿದಾಗ ಮಗು ಆರೋಗ್ಯವಾಗಿದೆ ಎಂದು ತಿಳಿದು ಬಂದಿದೆ. ಕುಟುಂಬ ಸದಸ್ಯರು ಗರ್ಭಪಾತಕ್ಕೆ ಒಪ್ಪಿಗೆ ನೀಡದ ಕಾರಣ ಬಹಳ ಜಾಗರೂಕತೆಯಿಂದ ಶಸ್ತ್ರಚಿಕಿತ್ಸೆ ಮಾಡಿದೆವು. ಇದೀಗ ಆಕೆ ಆರೋಗ್ಯವಂತ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.

ಈ ಏಳು ತಿಂಗಳ ಅವಧಿಯಲ್ಲಿ ಆಕೆಗೆ 5 ನ್ಯೂರೋ ಸರ್ಜರಿಗಳನ್ನು ಮಾಡಿರುವುದಾಗಿ ವೈದ್ಯರು ತಿಳಿಸಿದರು. ಚಿಕಿತ್ಸೆ ಮುಂದುವರಿದರೂ ಇನ್ನೆರಡು ವರ್ಷಗಳಲ್ಲಿ ಆಕೆ ಚೇತರಿಸಿಕೊಳ್ಳುವ ಸಾಧ್ಯತೆ ಶೇ.10-15 ಇದೆ. ಏಳೆಂಟು ತಿಂಗಳಿಂದ ಹೀನಾಯ ಸ್ಥಿತಿಯಲ್ಲಿದ್ದರೂ ಸಿಸೇರಿಯನ್ ಮಾಡದೆ ಸಾಮಾನ್ಯ ಹೆರಿಗೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!